
Featured StoryState News
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಮಹಿಳೆಯರಿಗೆ 107 ನೋಟಿಸ್ – ಎಸ್.ಡಿ.ಪಿ.ಐ ಆರೋಪ
ಮಂಗಳೂರು: ವಿವಾದಾತ್ಮಕ ಭಾಷಣ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಮನೆ ಬಳಿ ಪ್ರತಿಭಟನೆಗೆ ಮುಂದಾದ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಕಾರ್ಯಕರ್ತರಿಗೆ ಪೋಲೀಸರು 107ನಡಿಯಲ್ಲಿ ನೋಟೀಸು ನೀಡಿರುವುದಾಗಿ ತಿಳಿದು ಬಂದಿದೆ.
ಇದಕ್ಕೆ ಹಾಜರಾಗದ ಕಾರ್ಯಕರ್ತರು ಇದೀಗ ಬಂಟ್ವಾಳದಲ್ಲಿ ಪ್ರತಿಭಟನೆಗೆ ತಯಾರಿ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
‘ಪ್ರತಿಭಟನೆಗೆ ಕರೆ ನೀಡಿದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ನಾಯಕಿಯರ ವಿರುದ್ಧ 110 ಸೆಕ್ಷನ್ನಡಿ ಕೇಸು ದಾಖಲಿಸಿದ್ದು, ಪೊಲೀಸ್ ಇಲಾಖೆ ಯಾರನ್ನು ಓಲೈಸಲು ಹೊರಟಿದೆ ಎಂದು ಎಸ್ಡಿಪಿಐನ ರಿಯಾಝ್ ಫರಂಗಿಪೇಟೆ ಪ್ರಶ್ನಿಸಿದ್ದಾರೆ.




