Featured StoryNational

ಅಪರಾಧಿಕ ಕಾನೂನು ಮಸೂದೆಗಳ ಮೇಲೆ ವಿಸ್ತೃತ ವಿಶ್ಲೇಷಣೆಯುಳ್ಳ ವರದಿ ಬಿಡುಗಡೆ ಮಾಡಿದ ಎಪಿಸಿಆರ್

ನವದೆಹಲಿ: ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ ಮೂರು ಅಪರಾಧಿಕ ಕಾನೂನು ಮಸೂದೆಗಳನ್ನು ಅವಲೋಕಿಸಿ ವಿಸ್ತೃತವಾದ ವರದಿಯನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಹೊರ ತಂದಿದೆ.

ಮಂಡನೆಗೊಂಡ ಈ ಮೂರು ಮಸೂದೆಯಲ್ಲಿರುವ ನ್ಯೂನತೆಯನ್ನು ಸವಿವಿವರವಾಗಿ ಈ ವರದಿಯಲ್ಲಿ ವಿವರಿಸಲಾಗಿದೆ.

ಈ ವರದಿಯು ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನು ಮಸೂದೆಗಳ ಸಂಕ್ಷಿಪ್ತ ವಿಶ್ಲೇಷಣೆಯನ್ನು ಒದಗಿಸುತ್ತದೆ.ಅವುಗಳೆಂದರೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಮಸೂದೆ (BNSS), ಭಾರತೀಯ ನ್ಯಾಯ ಸಂಹಿತಾ ಮಸೂದೆ (BNS), ಮತ್ತು ಭಾರತೀಯ ಸಾಕ್ಷಿ ಮಸೂದೆ (BSB) ಗಳ ಕುರಿತು ವಿಶ್ಲೇಷಿಸಿ ತಜ್ಞರ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.

ಭಾರತದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಮತ್ತು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕುರುಹುಗಳನ್ನು ತೆಗೆಯುವ ಉದ್ದೇಶದಿಂದ ಈ ಮಸೂದೆಗಳನ್ನು ಆಗಸ್ಟ್ 2023 ರಲ್ಲಿ ಭಾರತೀಯ ಸಂಸತ್ತಿನಲ್ಲಿ ಸರ್ಕಾರವು ಪರಿಚಯಿಸಿತ್ತು.ಎಪಿಸಿಆರ್ ಹೊರತಂದಿರುವ ವರದಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button