Featured StoryState News

60% ಕನ್ನಡ ನಾಮಫಲಕ ಕಡ್ಡಾಯ: ತೀವ್ರಗೊಂಡ ಪ್ರತಿಭಟನೆ – ನಾರಾಯಣ ಗೌಡ ಪೊಲೀಸ್ ವಶಕ್ಕೆ

ಬೆಂಗಳೂರು, ಡಿಸೆಂಬರ್​​ 27: ಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (Karave) ಕಾರ್ಯಕರ್ತರಿಂದ ಅಭಿಯಾನ ಮಾಡಲಾಗುತ್ತಿದೆ. ನಗರದ ಲಾವೆಲ್ಲಿ ರಸ್ತೆಯಲ್ಲಿರುವ ಅಂಗಡಿಗಳ ಇಂಗ್ಲಿಷ್​ ಬೋರ್ಡ್​ಗಳನ್ನು ಪೀಸ್​ ಪೀಸ್​ ಮಾಡಿದ್ದಾರೆ.

ದೊಣ್ಣೆಯಿಂದ ಬೋರ್ಡ್​​ಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಗರದ ಹುಣಸಮಾರನಹಳ್ಳಿ ಬಳಿ ಕರವೇ ಟಿ.ಎ.ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಟಿ.ಎ.ನಾರಾಯಣ ಗೌಡ ಪ್ರತಿಕ್ರಿಯಿಸಿದ್ದು, ಕರವೇ ಕಾರ್ಯಕರ್ತರು ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡುತ್ತೇನೆ. ನನ್ನ ಈಗಾಗಲೇ ಪೋಲಿಸರು ಸಾದಹಳ್ಳಿ ಬಳಿಯೇ ವಶಕ್ಕೆ ಪಡೆದಿದ್ದಾರೆ. ಬಿಬಿಎಂಪಿ 8 ವಲಯದ ಅಧಿಕಾರಿಗಳು ಸಂಪರ್ಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿಯೇ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರಿಗೂ ನಾನು ಈ ಮೊದಲೇ ಮನವಿ ಮಾಡಿದ್ದೆ. ನಮ್ಮ ಕರವೇ ಹೋರಾಟ ಹತ್ತಿಕ್ಕಬೇಡಿ, ಕಬ್ಬನ್ ಪಾರ್ಕ್​ವರೆಗೆ ಬರಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೇವು. ಆದರೆ ಪೊಲೀಸರು ಈಗಲೇ ನನ್ನ ವಶಕ್ಕೆ ಪಡೆದಿದ್ದಾರೆ.

ಪೋಲಿಸರ ವರ್ತನೆ ಸರಿಯಿಲ್ಲದ ಕಾರಣ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನಲೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ, ಆದರೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಮ್ಮ ಕರವೇ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button