Bengaluru UrbanFeatured Story

ಬೆಂಗಳೂರು :ಅಪಾರ್ಟ್ಮೆಂಟ್ ನ ಈಜುಕೊಳದಲ್ಲಿ 10 ವರ್ಷದ ಬಾಲಕಿ ಸಾವು : ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು :ಬೆಂಗಳೂರಿನ ವರ್ತೂರು ಸಮೀಪದ ಗುಂಜೂರಿನ ಅಪಾರ್ಟ್ಮೆಂಟ್ ನ ಈಜುಕೊಳದಲ್ಲಿ ಗುರುವಾರ ತಡರಾತ್ರಿ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು.

ಮಗಳು ಈಜುಕೊಳದಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದಾರೆ. ಮೊದಲು ವಿದ್ಯುತ್ ಶಾಕ್ ನಿಂದ ಬಾಲಕಿ ಮೃತಪಟ್ಟಿದ್ದಳು ಎಂದು ಹೇಳಲಾಗಿತ್ತು. ಅದೇನೆ ಇರಲಿ ಬಾಲಕಿ ಸಾವಿಗೆ ನಿಖರ ಕಾರಣವೇನೆಂಬುದು ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಲಿದೆ. ಘಟನೆ ಸಂಬಂಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕಿ ಸಾವಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ವರ್ತೂರು ಸಮೀಪದ ಗುಂಜೂರಿನ ಅಪಾರ್ಟ್ಮೆಂಟ್ ನ ಈಜುಕೊಳದಲ್ಲಿ ಗುರುವಾರ ತಡರಾತ್ರಿ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು, ಈಜುಕೊಳದಲ್ಲಿ ಬಿದ್ದಿದ್ದ ಚೆಂಡನ್ನು ತರಲು ಹೋದಾಗ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button