Udupi

ಕಾಪು : ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ SDPI ವತಿಯಿಂದ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ

ಕಾಂಗ್ರೆಸ್ ಸರಕಾರಕ್ಕೆ ಧಿಕ್ಕರಿಸುವ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ SDPI ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹನೀಫ್ ಮೂಳೂರು.

ಕಾಪು : ಮಂಡ್ಯದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ನಿಂದಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ SDPI ಕಾಪು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ SDPI ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಹನೀಫ್ ಮೂಳೂರು ಮಾತನಾಡಿ
ಮುಸ್ಲಿಂ ಮಹಿಳೆಯರನ್ನು ಹೀನಾಯವಾಗಿ ನಿಂಧಿಸಿದ, ಧರ್ಮ ಧರ್ಮಗಳ ನಡುವೆ ಎತ್ತಿ ಕಟ್ಟಿ, ಪರಸ್ಪರ ದ್ವೇಷ ಭಾವ ಉಂಟುಮಾಡಿದ್ದಾನೆ,ಇಂಥ ಒಂದು ಕ್ರಿಮಿ ಕಲ್ಲಡ್ಕ ಪ್ರಭಾಕರ ಭಟ್ಟನ ಬಂಧನಕ್ಕೆ ನಿರಾಕ್ಷನೆ ತೋರಿಸಿದ ಸರ್ಕಾರಕ್ಕೆ ಧಿಕ್ಕರಿಸುತ್ತೇನೆ. ಮೈಸೂರಿನಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ವಾಕ್ಯದಲ್ಲಿ ನಿಂದನೆ ಮಾಡಿದ್ದಕ್ಕೆ ಅನಾರೋಗ್ಯ ಪೀಡಿತ ಅಂತ ಹೇಳಿದರು ಆ ಸಂದರ್ಭದಲ್ಲಿ ಕೆಲವೊಂದು ಇಲಿಗಳು ಮನೆ ಮನೆಗೆ ಹೋಗಿ ನಮ್ಮ ಪಕ್ಷಕ್ಕೆ ಮತ ನೀಡಿ ಭಟ್ಟನನ್ನು ಬಂಧಿಸುತ್ತೇವೆ ಎಂದು ಹೇಳಿದವರು ಇಂದು ಅವರದೇ ಸರ್ಕಾರ ಇರುವಾಗ ಅದೇ ಭಟ್ಟ ಮಂಡ್ಯದಲ್ಲಿ ತನ್ನ ಸ್ವಭಾವವನ್ನು ಮತ್ತೆ ತೋರಿಸಿದ್ದಾನೆ. ಭಟ್ಟನಿಗೆ ಹೆದರಿ ಇಲಿಗಳು ಅಡಗಿ ಕೂತಿವೆ ಲೋಕಸಭಾ ಚುನಾವಣೆ ಬರುವಾಗ ಹೊರಗೆ ಬರುತ್ತದೆ, ಇನ್ನಾದರೂ ಮುಸ್ಲಿಂ ಸಮುದಾಯ ಎಚ್ಚರವಾಗಿರಿ ಎಂದು ಕರೆಯನ್ನು ನೀಡಿದರು.

ಒಂದು ವೇಳೆ SDPIಯ 2 MLA ಗಳು ವಿಧಾನಸೌಧದ ಒಳಗೆ ಇದ್ದರೆ ಭಟ್ಟನನ್ನ ಬಂಧಿಸುವವರೆಗೆ ಬಿಡುತ್ತಿರಲಿಲ್ಲ,ಇನ್ನು ಮುಂದೆ ಮುಸಲ್ಮಾನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ SDPI ಕಾನೂನಾತ್ಮಕ ಹೋರಾಟವನ್ನು ಮಾಡೇ ಮಾಡುತ್ತೇವೆ,ಇಂದು ಉಚ್ಚಿಲ ಪೇಟೆಯಲ್ಲಿ,ಎಸ್ ಡಿ ಪಿ ಐ ವತಿಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಇದು ಆರಂಭ,ಭಟ್ಟನನ್ನು ಬಂಧಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಎಂದು ಸರಕಾರಕ್ಕೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಸರಕಾರದ ವಿರುದ್ಧ ಸಿಡಿದೆದ್ದ SDPI ಮಹಿಳಾ ಘಟಕದ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ.

ಮಹಿಳೆಯರನ್ನು ಅತ್ಯಂತ ಅಶ್ಲೀಲವಾಗಿ ನಿಂದಿಸಿದ ಪ್ರಭಾಕರ ಭಟ್ಟನ ವಿರುದ್ಧ ಮತ್ತು ಮಹಿಳೆಯರ ವಿರುದ್ಧ ಪ್ರಚೋದನಕಾರಿಯಾಗಿ ಮಾತಾಡುವವರ ವಿರುದ್ಧ ಯಾರು ನಿಲ್ಲದಿದ್ದರೂ ವಿಮೆನ್ ಇಂಡಿಯಾ ಮೂವ್ಮೆಂಟ್ ಇವರ ವಿರುದ್ಧ ನಿಲ್ಲಲು ಯಾವತ್ತೂ ಸಿದ್ಧ. ಒಂದು ವೇಳೆ ಇನ್ನೊಂದು ಸಲ ಮುಸ್ಲಿಂ ಮಹಿಳೆ ಅಥವಾ ಯಾವ ಧರ್ಮದ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿದರೆ ಮಹಿಳೆಯರೆಲ್ಲರೂ ಸೇರಿ ಕಲ್ಲಡ್ಕ ಭಟ್ಟನಿಗೆ ಪಾಠ ಕಲಿಸಬೇಕಾಗುತ್ತದೆ. ಕಲ್ಲಡ್ಕ ಭಟ್ಟ ಇಡೀ ಸಮಾಜಕ್ಕೆ ವೈರಸ್ ಈ ವೈರಸ್ಸನ್ನು ಬೇಗ ತಡೆಯದೆ ಹೋದರೆ ಇಡೀ ಸಮಾಜಕ್ಕೆ ಈ ವೈರಸ್ ಹರಡಬಹುದು ಆದ್ದರಿಂದ ಸರಕಾರ ಶೀಘ್ರವೇ ಭಟ್ಟನನ್ನು ಬಂಧಿಸಬೇಕೆಂದು SDPI ಕಾಪು ಕ್ಷೇತ್ರ ಸಮಿತಿ ವತಿಯಿಂದ ಹಮ್ಮಿಕೊಂಡಂತಹ ಪ್ರತಿಭಟನಾ ಸಭೆಯಲ್ಲಿ ವಿಮ್ ಇದರ ಉಡುಪಿ ಜಿಲ್ಲಾಧ್ಯಕ್ಷೆ ಯಾದ ನಾಝಿಯ ನಸ್ರುಲ್ಲರವರು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ SDPI ಜಿಲ್ಲಾ ಸಮಿತಿಯ ನಾಯಕರು ಸ್ಥಳೀಯ ನಾಯಕರ ವಿಮ್ ನಾಯಕಿಯರು ಹಾಗೂ ಕಾರ್ಯಕರ್ತರು . ಕ್ಷೇತ್ರದ ನಾಗರಿಕರು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button