
Crime
ಮಧ್ಯಪ್ರದೇಶ: 3.3 ತೀವ್ರತೆಯ ಭೂಕಂಪ,ನಡುಗಿದ ಭೂಮಿ
ನವದೆಹಲಿ : ಮಧ್ಯಪ್ರದೇಶದಲ್ಲಿ ಮತ್ತೆ ಭೂಕಂಪನವಾಗಿದ್ದು, ಸಿಂಗ್ರೌಲಿಯಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಿಂಗ್ರೌಲಿಯಲ್ಲಿ ಭೂಕಂಪದ ತೀವ್ರತೆ 3.6 ರಷ್ಟಿತ್ತು.
ಇದು 31 ಡಿಸೆಂಬರ್ 2023 ರಂದು ಅಂದರೆ ಭಾನುವಾರ ಮಧ್ಯಾಹ್ನ 2:33 ಕ್ಕೆ ಬಂದಿತು. ಇದಕ್ಕೂ ಮುನ್ನ ಡಿಸೆಂಬರ್ 26 ರಂದು ಸಿಗ್ರೌಲಿಯಲ್ಲಿ ಭೂಕಂಪ ಸಂಭವಿಸಿತ್ತು. ಡಿಸೆಂಬರ್ 26ರಂದು ಭೂಕಂಪದ ತೀವ್ರತೆ 3.3ರಷ್ಟಿತ್ತು.ಈ ಭೂಕಂಪದಲ್ಲಿ ಕಂಪನದ ತೀವ್ರತೆ ಕಡಿಮೆ ಇತ್ತು, ಇದರಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.




