obituaryState News

ಗುಜರಾತ್‌ನಲ್ಲಿ ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ

ಗುಜರಾತ್‌: ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಬೊಟಾಡ್​ ಜಿಲ್ಲೆಯಲ್ಲಿ ನಡೆದಿದೆ.

ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಮೃತರನ್ನು ಮಂಗಾಭಾಯಿ ವಿಜುದಾ ಎಂದು ಗುರುತಿಸಲಾಗಿದ್ದು, ಅವರ ಪುತ್ರಿಯರಾದ ಸೋನಂ (17), ರೇಖಾ (21) ಮತ್ತು ಮಗ ಜಿಗ್ನೇಶ್ (19) ಬೋಟಾಡ್‌ನ ಗಧಾಡಾ ತಾಲೂಕಿನ ನಾನಾ ಸಖ್‌ಪರ್ ಗ್ರಾಮದವರಾಗಿದ್ದಾರೆ.

ಈ ಘಟನೆ ಭಾನುವಾರ ಸಂಜೆ 6:30ಕ್ಕೆ ನಿಂಗಲಾ ಮತ್ತು ಆಲಂಪುರ್ ನಿಲ್ದಾಣಗಳ ನಡುವೆ ನಡೆದಿದೆ ಎಂದು ರೈಲ್ವೇ ರಕ್ಷಣಾ ಪಡೆ ಸಬ್ ಇನ್ಸ್‌ಪೆಕ್ಟರ್ ವಿಎಸ್ ಗೋಲೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂಬಂಧಿಕರೊಂದಿಗಿನ ಜಗಳದ ನಂತರ ಕೊಲೆ ಯತ್ನದ ಆರೋಪದ ಮೇಲೆ ವಿಜುದಾ ಬಂಧನಕ್ಕೊಳಗಾದ ನಂತರ ಜಾಮೀನಿನ ಮೇಲೆ ಹೊರಗಿದ್ದರು. ನಾಲ್ವರು ಭಾವನಗರದಿಂದ ಗಾಂಧಿಧಾಮ್‌ಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನ ಮುಂದೆ ಹಾರಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button