
ಇನ್ನುಮುಂದೆ ಸುಖಾಸುಮ್ಮನೆ ರೋಗಿಗಳನ್ನು ಐಸಿಯುವಿಗೆ ದಾಖಲಿಸುವಂತಿಲ್ಲ: ಕೇಂದ್ರ ಸರ್ಕಾರದ ಹೊಸ ನಿಯಮ
*******************************
ಕೇಂದ್ರ ಸರ್ಕಾರವು ಆರೋಗ್ಯ-ಆಸ್ಪತ್ರೆಗಳ ವಿಚಾರದಲ್ಲಿ ಹೊಸ ನಿಯಮವನ್ನು ರೂಪಿಸಿದ್ದು ಅದೇನೆಂದರೆ ಇನ್ನು ಮುಂದೆ ರೋಗಿಗಳನ್ನು ಸುಖಾಸುಮ್ಮನೆ ತೀವ್ರ ನಿಗಾ ಘಟಕಕ್ಕೆ ದಾಖಲಿಸುವಂತಿಲ್ಲ ಎಂದು ಸೂಚಿಸಿದೆ.
ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಐಸಿಯು ವಿನಲ್ಲಿ ಚಿಕಿತ್ಸೆ ಪಡೆಯುವ ರೋಗಿಯ ಅಗತ್ಯವನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ನಿಯಮಗಳನ್ನು ಕ್ರಿಟಿಕಲ್ ಕೇರ್ ಮೆಡಿಸಿನ್ನಲ್ಲಿ ಪರಿಣತಿ ಹೊಂದಿರುವುದು 24 ಉನ್ನತ ವೈದ್ಯರ ಸಮಿತಿಯು ರಚಿಸಿದೆ.
ರೋಗಿಗೆ ಪ್ರಜ್ಞೆ ಇಲ್ಲದಿರುವುದು ಅಥವಾ ಕೃತಕ ಉಸಿರಾಟದ ಸಹಾಯದ ಅಗತ್ಯವಿರಬೇಕಾದ ಅಥವಾ ತೀವ್ರವಾದ ಮೇಲ್ವಿಚಾರಣೆಯ ಅಗತ್ಯವಿರುವ ಯಾವುದೇ ರೋಗಿಗೆ ತೀವ್ರ ಅನಾರೋಗ್ಯದ ಸಂದರ್ಭಗಳಲ್ಲಿ ಐಸಿಯು ಆರೈಕೆಯನ್ನು ಶಿಫಾರಸು ಮಾಡಲಾಗಿದೆ.
ನಿಜವಾಗಿಯೂ ಯಾರಿಗೆ ಐಸಿಯು ಅಗತ್ಯವಿರುತ್ತದೆಯೋ ಅವರು ಪಡೆಯುವಂತಾಗಲಿ ಎಂಬುದು ಈ ನಿಯಮದ ಮೂಲ ಉದ್ದೇಶವಾಗಿದ್ದು ಕೆಲವೊಮ್ಮೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿದ್ದರೂ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇನ್ಯಾವುದೋ ರೋಗಿಗೆ ಗಂಭೀರ ಸಮಸ್ಯೆಯಿದ್ದರೆ ಆ ಸಮಯದಲ್ಲಿ ಐಸಿಯುನಲ್ಲಿ ಹಾಸಿಗೆ ದೊರೆಯದೆ ಚಿಕಿತ್ಸೆಯಿಂದ ವಂಚಿತರಾಗುವುದನ್ನು ತಡೆಯಲು ಈ ನಿಯಮ ರೂಪಿಸಲಾಗಿದೆ.




