
Mumbai
ಜ.5ಕ್ಕೆ ದಾವೂದ್ ಇಬ್ರಾಹಿಂ ಬಾಲ್ಯದ ಮನೆ ಹರಾಜು
ನವದೆಹಲಿ,ಜ.2- ಮಹಾರಾಷ್ಟ್ರದ ರತ್ನಗಿರಿಯಲ್ಲಿ ಇರುವ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು ಮಾಡಲಾಗುತ್ತಿದೆ.ದಾವೂದ್ಗೆ ಸೇರಿದ ಈ ಎಲ್ಲಾ ನಾಲ್ಕು ಆಸ್ತಿಗಳು ಕೃಷಿ ಮತ್ತು ಮುಂಬಾಕೆ ಗ್ರಾಮದಲ್ಲಿ ನೆಲೆಗೊಂಡಿವೆ.
ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಜ. 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿಗೆ ಮಾರಾಟವಾದ ರೆಸ್ಟೋರೆಂಟ್, 3.53 ಕೋಟಿಗೆ ಆರು ಫ್ಲಾಟ್ಗಳು ಮತ್ತು 3.52 ಕೋಟಿಗೆ ಮಾರಾಟವಾದ ಅತಿಥಿ ಗೃಹಗಳು ಸೇರಿವೆ.




