
ಮಲ್ಪೆ: ಪಡುಕೆರೆ ಪಾಪನಾಶಿನಿ ನದಿಯ ಬಳಿ ಮೃತ ದೇಹ ಪತ್ತೆ
ಮಲ್ಪೆ: ಪಡುಕೆರೆ ಪಾಪನಾಶಿನಿ ನದಿಯ ಬಳಿ ಮೃತ ದೇಹ ಪತ್ತೆಯಾಗಿದೆ.
ಕಡೇಕಾರು ಪಡುಕೆರೆ ಪಾಪನಾಶಿನಿ ನದಿಯ ಹತ್ತಿರ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಸಮಾಜ ಸೇವಕ ಈಶ್ವರ ಮಲ್ಪೆರವರ ಸಹಾಯದಿಂದ ಮೃತದೇಹವನ್ನು ಮೇಲೆತ್ತಿ ತರಲಾಗಿದ್ದು, ಮೃತದೇಹವು 30-35 ವರ್ಷದ ಪ್ರಾಯದ ವ್ಯಕ್ತಿಯದ್ದಾಗಿದೆ. ಮೃತದೇಹದ ಮೈಮೇಲೆ ಹಳದಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ , ಬಲ ಕೈಯಲ್ಲಿ ಸ್ಟೀಲ್ಟ್ ನಂತಹ ಕೈ ಕಡಗ, ಎಡ ಕೈಯಲ್ಲಿ ಕಪ್ರು ಮಣಿಯ ಸರ ಇರುವುದು ಕಂಡು ಬಂದಿರುತ್ತದೆ . ಮೃತನು ಸುಮಾರು 2 ದಿನಗಳ ಹಿಂದೆ ನೀರಿಗೆ ಬಿದ್ದಿರಬಹುದು.
ಮೃತರ ಪ್ಯಾಂಟಿನ ಜೇಬಿನಲ್ಲಿ ಆದಾರಕಾರ್ಡ್ ಸಿಕ್ಕಿದ್ದು , ಆದಾರ ಕಾರ್ಡ್ ನಲ್ಲಿ Ganagalla Seetam Waiḑu S/o Koriayya̧ Ho No 1-93 Kunduvani Peţa Andrapradesh State ಎಂದು ತಿಳಿದು ಬಂದಿರುತ್ತದೆ.
ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ 06/2024 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.




