Udupi

ಮಲ್ಪೆ: ಪಡುಕೆರೆ ಪಾಪನಾಶಿನಿ ನದಿಯ ಬಳಿ ಮೃತ ದೇಹ ಪತ್ತೆ

ಮಲ್ಪೆ: ಪಡುಕೆರೆ ಪಾಪನಾಶಿನಿ ನದಿಯ ಬಳಿ ಮೃತ ದೇಹ ಪತ್ತೆಯಾಗಿದೆ.

ಕಡೇಕಾರು ಪಡುಕೆರೆ  ಪಾಪನಾಶಿನಿ ನದಿಯ ಹತ್ತಿರ   ಮೃತದೇಹವು ಕವುಚಿ ಬಿದ್ದ  ಸ್ಥಿತಿಯಲ್ಲಿ ಕಂಡು ಬಂದಿದೆ. ಸಮಾಜ ಸೇವಕ  ಈಶ್ವರ ಮಲ್ಪೆರವರ  ಸಹಾಯದಿಂದ ಮೃತದೇಹವನ್ನು ಮೇಲೆತ್ತಿ ತರಲಾಗಿದ್ದು, ಮೃತದೇಹವು   30-35 ವರ್ಷದ  ಪ್ರಾಯದ ವ್ಯಕ್ತಿಯದ್ದಾಗಿದೆ.   ಮೃತದೇಹದ ಮೈಮೇಲೆ  ಹಳದಿ ಬಣ್ಣದ ಅರ್ಧ ತೋಳಿನ  ಟಿ ಶರ್ಟ್‌, ತಿಳಿ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ , ಬಲ ಕೈಯಲ್ಲಿ ಸ್ಟೀಲ್ಟ್‌ ನಂತಹ ಕೈ ಕಡಗ, ಎಡ ಕೈಯಲ್ಲಿ  ಕಪ್ರು ಮಣಿಯ ಸರ  ಇರುವುದು ಕಂಡು ಬಂದಿರುತ್ತದೆ . ಮೃತನು ಸುಮಾರು 2 ದಿನಗಳ ಹಿಂದೆ ನೀರಿಗೆ ಬಿದ್ದಿರಬಹುದು.

ಮೃತರ  ಪ್ಯಾಂಟಿನ ಜೇಬಿನಲ್ಲಿ  ಆದಾರಕಾರ್ಡ್‌ ಸಿಕ್ಕಿದ್ದು , ಆದಾರ ಕಾರ್ಡ್‌ ನಲ್ಲಿ Ganagalla Seetam Waiḑu S/o Koriayya̧  Ho No 1-93  Kunduvani Peţa Andrapradesh   State ಎಂದು ತಿಳಿದು ಬಂದಿರುತ್ತದೆ.

ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ  06/2024 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button