
Uttara KannadaFeatured Story
ಮೀನುಗಾರಿಕಾ ಬೋಟ್ ಗೆ ನುಗ್ಗಿದ ನೀರು: ಬೋಟ್ ಹಾಗೂ 7 ಜನ ಮೀನುಗಾರರ ರಕ್ಷಣೆ
ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ನೀರು ನುಗ್ಗಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಕಾರವಾರದ ಬೈತ್ ಖೋಲ್ ಬಂದರಿನಲ್ಲಿ ಬುಧುವಾರ ನಡೆದಿದೆ.
ಮಂಗಳೂರಿನ ಏಳು ಮಂದಿ ಮೀನುಗಾರರಿದ್ದ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ರಾಯಲ್ ಬ್ಲ್ಯೂ, ಕಾರವಾರದ ಬೈತಖೋಲ್ ಬಂದರಿನಿಂದ 40 ನಾಟಿಕಲ್ ಮೈಲು ದೂರದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಅಪಾಯಕ್ಕೆ ಸಿಲುಕಿತ್ತು.
ಇದರಿಂದಾಗಿ ಆತಂಕಕ್ಕೊಳಗಾದ ಮೀನುಗಾರರು ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್ ಗೆ ಸಂದೇಶ ರವಾನಿಸಿದ್ದರು.
ಬೋಟ್ ಒಳಗಡೆ ನೀರು ನುಗ್ಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಹಾಗೂ ಗೋವಾ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿತ್ತು. ಕೊನೆಗೆ ಆರು ಬೋಟ್ ಗಳ ಸಹಾಯದಿಂದ ಮುಳುಗುತ್ತಿದ್ದ ಬೋಟನ್ನು ಎಳೆದು ಕಾರವಾರದ ಬಂದರಿಗೆ ತರಲಾಗಿದ್ದು, ಎಲ್ಲಾ 7 ಜನ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ ಗಾರ್ಡ ತಿಳಿಸಿದೆ.
…..
…..




