CrimeUdupi

ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಅಪರಿಚಿತ ವ್ಯಕ್ತಿಯಿಂದ‌ ಮಗುವಿನ ಚಿನ್ನದ ಸರ ಸುಲಿಗೆ

ಉಡುಪಿ, ಜ.19: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗೆ ತಾಯಿಯೊಂದಿಗೆ ಬಂದಿದ್ದ ಬಾಲಕಿಯೊಬ್ಬಳ ಚಿನ್ನದ ಸರವನ್ನು ಅಪರಿಚಿತರಿಬ್ಬರು ಸುಲಿಗೆ ಮಾಡಿರುವ ಘಟನೆ ಜ.18ರಂದು ಸಂಜೆ ವೇಳೆ ನಡೆದಿದೆ.

ಕೊರಂಗ್ರಪಾಡಿ ವಾಸುಕೀ ನಗರದ ಶರೀನ ಬೇಗಂ ಎಂಬವರು ತನ್ನ ಪುತ್ರಿ ಅನ್ಹ(4) ಜೊತೆಗೆ ರಥಬೀದಿಗೆ ಬಂದಿದ್ದ, ಕನಕ ಗೋಪುರದ ಹತ್ತಿರವಿರುವ ಅಂಗಡಿಯಲ್ಲಿ ಸಾಮಾನುಗಳನ್ನು ನೋಡುತ್ತಿದ್ದಾಗ 30-35 ವರ್ಷದ ಪ್ರಾಯದ ಅಪರಿಚಿತರಿಬ್ಬರು, ಅನ್ಹಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಕೊಂಡು ಪರಾರಿಯಾದರೆನ್ನಲಾಗಿದೆ. ಕಳವಾದ ಚಿನ್ನದ ಸರದ ಮೌಲ್ಯ 50000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button