Featured StoryState News

ಈ ಸರಕಾರ ನಿಮ್ಮ (ಮುಸ್ಲಿಮರ) ಪರವಾಗಿಯೂ ನಿಂತುಕೊಳ್ಳುತ್ತದೆ: ಡಿಕೆ ಶಿವಕುಮಾರ್

ಮಂಗಳೂರು: ಇದು ನಿಮ್ಮ ಸರಕಾರ. ಈ ಸರಕಾರ ನಿಮ್ಮ ಪರವಾಗಿ ನಿಂತುಕೊಂಡಿದೆ; ನಿಂತುಕೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆದ ಎಸ್‌ವೈಎಸ್‌ (ಸುನ್ನಿ ಯುವಜನ ಸಂಘ) ಸಂಘಟನೆಯ 30ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಸರಕಾರ ಎಲ್ಲಾ ಜಾತಿ, ಎಲ್ಲ ಧರ್ಮಗಳನ್ನು ರಕ್ಷಣೆ ಮಾಡುವ ಸರಕಾರ. ಸಂವಿಧಾನವನ್ನು ಬಲಿಷ್ಠಗೊಳಿಸುವ ಸರಕಾರ ಎಂದು ಡಿಕೆಶಿ ಹೇಳಿದರು.

ಕಳೆದ 10 – 15 ವರ್ಷಗಳಲ್ಲಿ ನೀವು ದೇಶದ ರಾಜಕಾರಣವನ್ನು ನೋಡುತ್ತಾ ಬಂದಿದ್ದೀರಿ. ಪಕ್ಷವೊಂದು ಜನರ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದೆ. ಆದರೆ ನಾವು ನಿಮ್ಮ ಬದುಕಿನ ಬದಲಾವಣೆಯ ರಾಜಕೀಯ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ನಿಮ್ಮೆಲ್ಲರ ಸಂಘಟನೆ, ಆಶೀರ್ವಾದದಿಂದ ನಮಗೆ ಶಕ್ತಿ ಬಂದಿದೆ. ನಾವು ರಾಜ್ಯದಲ್ಲಿ ಆಡಳಿತ ನಡೆಸುವಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button