
ಹಿಂದೂ ದೇವಾಲಯಗಳಿಗೆ ಕೊಡುಗೆ ನೀಡಿದ್ದ ಟಿಪ್ಪು ಸುಲ್ತಾನ್ !
ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ ರಾಜ್ಯದ ಅನೇಕ ಹಿಂದೂ ದೇವಾಲಯಗಳು ಮತ್ತು ಮಠಗಳಿಗೆ ಉದಾರವಾಗಿ ಕೊಡುಗೆ ನೀಡಿದ್ದರು. ಸುಮಾರು 156 ಹಿಂದೂ ದೇವಾಲಯಗಳಿಗೆ ನೆರವು ನೀಡಿದ್ದಕ್ಕೆ, ಪೋಷಿಸಿದ್ದಕ್ಕೆ ದಾಖಲೆಗಳಿವೆ. ಇದು ಟಿಪ್ಪು ಸುಲ್ತಾನ್ ಅವರ ಧಾರ್ಮಿಕ ಸಹಿಷ್ಣತೆಗೆ ಸಾಕ್ಷಿಯಾಗಿದೆ.
ದೇವಸ್ಥಾನಗಳು, ಮಠಗಳು ಹೀಗೆ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಉದಾರವಾಗಿ ಕೊಡುಗೆ ನೀಡಿದ್ದರು. ಅವುಗಳ ಬೆಳವಣಿಗೆಗೆ ನೆರವಾಗಿದ್ದರು. ಇದಕ್ಕೆ ಬೇಕಾದಷ್ಟು ಸಾಕ್ಷಿಗಳೂ ಇವೆ.
ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿ ಬಟ್ಟಲುಗಳನ್ನು ದಾನ ಮಾಡಿದರು, ಇದನ್ನು ಇಂದಿಗೂ ದೈನಂದಿನ ಪೂಜಾ ವಿಧಿಗಳಿಗೆ ಬಳಸಲಾಗುತ್ತದೆ. ನಾಲ್ಕು ಬೆಳ್ಳಿ ಪಾತ್ರೆಗಳಲ್ಲಿ ಟಿಪ್ಪುವಿನ ಹೆಸರು ಮತ್ತು ಶ್ರೀ ಕೃಷ್ಣ' ಎಂದು ಕೆತ್ತಲಾಗಿದೆ. ನಂಜನಗೂಡಿನ ನಂಜುAಡೇಶ್ವರ ದೇವಸ್ಥಾನದಲ್ಲಿ ಶಿವ ವಿಗ್ರಹವನ್ನು ಸ್ಥಾಪಿಸಲು ಆದೇಶ ನೀಡಿದವರು ಟಿಪ್ಪು ಸುಲ್ತಾನ್. ಅಲ್ಲಿನ ಲಿಂಗವನ್ನುಬಾದಶಾ ಲಿಂಗ’ ಎಂದು ಕರೆಯಲಾಗುತ್ತದೆ ಏಕೆಂದರೆ “ಆಡಳಿತಗಾರ” ಟಿಪ್ಪು ಅದನ್ನು ದಾನ ಮಾಡಿದ್ದರು.
1776 ರಲ್ಲಿ ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನಕ್ಕೆ ಸುಲ್ತಾನ್ 123.04 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ದೇವಾಲಯದ ಚಾಲ್ತಿಯಲ್ಲಿರುವ ಆಚರಣೆಗಳ ಪ್ರಕಾರ, ಟಿಪು ಸುಲ್ತಾನ್ ಸ್ಥಾಪಿಸಿದ ಪಟಾಕಿ ಸಲ್ತನತೆ ವೇದಿ' ಕೇಳಿದ ನಂತರವೇ ರಾತ್ರಿಗರ್ಭಗುಡಿ’ ಮುಚ್ಚಲ್ಪಡುತ್ತದೆ.
ಬೆಡ್ನಾರ್ನಲ್ಲಿರುವ ಶೃಂಗೇರಿ ಮಠಕ್ಕೂ ಟಿಪ್ಪು ಸುಲ್ತಾನ್ ನೆರವು ನೀಡಿದ್ದರು. ಮಠದೊಂದಿಗೆ ನಿಕಟ ಸಂಪರ್ಕವನ್ನೂ ಇಟ್ಟುಕೊಂಡಿದ್ದರು. ಅಮೂಲ್ಯವಾದ ಉಡುಗೋರೆಗಳನ್ನು ಕೊಡುಗೆಯಾಗಿ ನೀಡಿದ್ದರು.
1791 ರಲ್ಲಿ ಮರಾಠರು ಮೈಸೂರು ಜಿಲ್ಲೆಯ ಬೆಡ್ನೂರ್ ಮೇಲೆ ದಾಳಿ ಮಾಡಿದ್ದರು. ಅಲ್ಲಿನ ಶೃಂಗೇರಿ ಮಠವನ್ನು ದೋಚಿದರು ಮತ್ತು ದೇವಾಲಯದ ಪ್ರಧಾನ ದೇವತೆ ಶಾರದಾಂಬೆಯ ವಿಗ್ರಹವನ್ನು ನಾಶಪಡಿಸಿದರು.
ಮರಾಠರ ದಾಳಿಯಿಂದ ಹೆದರಿದ್ದ ಸ್ವಾಮಿ ಶಂಕರಾಚಾರ್ಯರು ಈ ಕುರಿತು ಅರಸ ಟಿಪ್ಪು ಸುಲ್ತಾನ್ಗೆ ಪತ್ರ ಬರೆದಿದ್ದರು. ಶಾರದಾ ಮಾತೆಯ ವಿಗ್ರಹವನ್ನು ಮರುಸ್ಥಾಪಿಸಲು ನೆರವು ನೀಡುವಂತೆ ಕೋರಿದ್ದರು.
ಈ ವಿಷಯ ತಿಳಿದ ಟಿಪ್ಪು ಸುಲ್ತಾನ್ ದು:ಖಿತರಾಗಿದ್ದರು. ಪವಿತ್ರ ಸ್ಥಳದ ಮೇಲೆ ದಾಳಿ ಮಾಡಿದವರು ತಮ್ಮ ದುಷ್ಕೃತ್ಯದ ಪರಿಣಾಮಗಳನ್ನು ಎದುರಬೇಕಾಗುತ್ತದೆ ಎಂದು ಹೇಳಿದ್ದರು. ಶಾರದಾ ಮಾತೆಯ ವಿಗ್ರಹ ಮರುಸ್ಥಾಪನೆಗೆ ಅಗತ್ಯ ನೆರವು ನೀಡಿದ್ದಲ್ಲದೆ, ಅಮೂಲ್ಯವಾದ ಉಡುಗೋರೆಗಳನ್ನೂ ಕಳಿಸಿಕೊಟ್ಟಿದ್ದರು.
ವಿದ್ವಾಂಸರಾದ ಬಿ.ಎ.ಸಾಲತೊರೆ ಅವರ ಪ್ರಕಾರ, ಮರಾಠರ ದಾಳಿಯ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಕಾಪಾಡುವ ಕೆಲಸ ಮಾಡಿದ್ದರು.
ಮೈಸೂರಿನ ಚಾಮರಾಜಪೇಟೆಯಲ್ಲಿರುವ ಕೋಟೆ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ 80 ಅಡಿ ಎತ್ತರದ ಕಲ್ಲಿನ ಕಂಬವು 1791 ರಲ್ಲಿ ನಡೆದ ಮೂರನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನನ್ನು ಬ್ರಿಟಿಷ್ರ ಫಿರಂಗಿ ಗುಂಡಿನಿAದ ರಕ್ಷಿಸಿತ್ತು. ಅರಸ ಟಿಪ್ಪು ನಿಯಮಿತವಾಗಿ ಈ ದೇವತೆಗೆ ಗೌರವ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಈಗಲೂ ಹಿಂದಿನ ಘಟನೆಗಳನ್ನು ದೇವಸ್ಥಾನದ ಅರ್ಚಕರು ನೆನಪಿಸಿಕೊಳ್ಳುತ್ತಾರೆ.
ಮುತ್ತರೆಕುಂಠದ ಭಗವತಿ ದೇವಸ್ಥಾನಕ್ಕೆ ಟಿಪ್ಪು ಸುಲ್ತಾನ್ 194.51 ಎಕರೆ ಜಮೀನು ಮಂಜೂರು ಮಾಡಿದ್ದರು. ಇದು ಸಂಪೂರ್ಣವಾಗಿ ತೆರಿಗೆ ರಹಿತವಾಗಿತ್ತು. ಇದಕ್ಕೆ ಇನಾಂ ರಿಜಿಸ್ಟಾರ್ ದಾಖಲೆಗಳೂ ಇವೆ.
ನಂಜನಗೂಡು ತಾಲೂಕಿನ ಮೇಲುಕೋಟೆಯಲ್ಲಿರುವ ನಾರಾಯಣಸ್ವಾಮಿ ದೇವಸ್ಥಾನಕ್ಕೆ, ಇದೇ ತಾಲೂಕಿನ ಕಳಾಲೆಯಲ್ಲಿರುವ ಲಕ್ಷಿö್ಮÃಕಾಂತ ದೇವಸ್ಥಾನಕ್ಕೆ, ನಂಜನಗುಡಿನಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ನೀಡಿದ್ದಕ್ಕೆ ದಾಖಲೆಗಳಿವೆ.
ದಸರಾ ಹಬ್ಬ ಆಚರಣೆಯಲ್ಲಿ ಟಿಪ್ಪು ಸುಲ್ತಾನ್ ಅವರು ಒಡೆಯರ ಮನೆತನದೊಂದಿಗೆ ಪಾಲ್ಗೊಳ್ಳುತ್ತಿದ್ದರು. ಅರಮನೆಯ ಅಂಗಳದಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ವಿಷಯದಲ್ಲಿ ಹೈದರ್ ಅಲಿ ಸಹ ಹಿಂದೆ ಬಿದ್ದಿರಲಿಲ್ಲ. ಅಪ್ಪ ಮಕ್ಕಳಿಬ್ಬರೂ ತಮ್ಮ ಅರಮನೆಯ ಆವರಣದಲ್ಲಿ ಹಿಂದು ಹಬ್ಬಗಳ ಆಚರಣೆಗೆ ಪ್ರೋತ್ಸಾಹ ನೀಡುತ್ತಿದ್ದರು. ತಾವೂ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು.




