
ದ್ವಿತೀಯ ಪಿಯು ಫಲಿತಾಂಶ: ಉತ್ತರ ಕನ್ನಡ ಜಿಲ್ಲೆಗೆ ಹೆಸರು ತಂದ ಸಿಂಚನಾ -ಧನ್ಯ, ಅಕ್ಷತಾ
ಸಿಂಚನಾ ರಾಜ್ಯಕ್ಕೆ 6 ನೇ ಸ್ಥಾನ
ಧನ್ಯ ಭಟ್ ರಾಜ್ಯಕ್ಕೆ 3 ನೇ ಸ್ಥಾನ
ಕಲಾ ವಿಭಾಗದಲ್ಲಿ ಅಕ್ಷತಾ ಜಿಲ್ಲೆಗೆ ಪ್ರಥಮ.ಶೇ.97.66
ಕಾರವಾರ : ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಉತ್ತಮ ಸಾಧನೆ ಮಾಡಿದ ಕೊಳಗಿಬೀಸ್ ಗ್ರಾಮದ ಅಕ್ಷತಾ, ಕುಮಟಾದ ಧನ್ಯ, ಶಿರಸಿಯ ಸಿಂಚನಾ ಜಿಲ್ಲೆಗೆ ಹೆಸರು ತಂದಿದ್ದಾರೆ.
ರಾಜ್ಯದಲ್ಲಿ ಪಿಯು ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಶೇ.92.51 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಸಹ ಜಿಲ್ಲೆ ಪಿಯು ಫಲಿತಾಂಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಈ ವರ್ಷ ಸಹ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಶೇ. 89.74 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು .ಈ ಸಲ ಶೇ. 92.51 ರಷ್ಟು ತೇರ್ಗಡೆಯಾಗಿದ್ದು, ಶೇ. 0.77 ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ . ಶೇಕಡವಾರು ಫಲಿತಾಂಶ ಉತ್ತಮ ಗೊಂಡಿದೆ ಎಂದು ಪಿಯು ಉಪ ನಿರ್ದೇಶಕ ಸತೀಶ್ ನಾಯ್ಕ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಕೊಳಗಿಬೀಸ್ ವಿದ್ಯಾರ್ಥಿನಿ ಅಕ್ಷತಾ ಸತೀಶ್ ಹೆಗಡೆ ಶೇ. 97.66 ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದರೆ, ಶಿರಸಿಯ ದಿವ್ಯಾ ( 97.33) , ಶಿರಸಿಯ ಜೈಬಾ (96.83 ) ನಂತರದ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕುಮಟಾ ನಲ್ಲಿಕೇರಿಯ ಸರ್ಕಾರಿ ಪಿಯು ಕಾಲೇಜಿನ ಧನ್ಯಾ ಆರ್ ಭಟ್ ಶೇಕಡಾ 99.16 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 3 ನೇ ಸ್ಥಾನದಲ್ಲಿ ಇದ್ದಾನೆ. ಶಿರಸಿಯ ಅಮಿತ್ , ರಮ್ಯ ನಂತರದ ಸ್ಥಾನದಲ್ಲಿ ಇದ್ದಾರೆ.
ಸೈನ್ಸ ವಿಭಾಗದಲ್ಲಿ ಶಿರಸಿ ಚಂದನಾ ಪಿಯು ಕಾಲೇಜಿನ ವಿದ್ಯಾರ್ಥಿ ಸಿಂಚನಾ .ಜಿ.ಹೆಗಡೆ, ಶೇ. 98.83 ಅಂಕಗಳಿಸಿ ರಾಜ್ಯಕ್ಕೆ ಆರನೇ ಸ್ಥಾನದಲ್ಲಿ ಇದ್ದಾಳೆ.
ಶ್ರಾವ್ಯ 98.66 , ಯಶಸ್ವಿನಿ 98.5 , ಸನ್ಮತಿ ಹೆಗಡೆ 97.5 ಅಂಕಗಳಿಸಿ ನಂತರದ ಸ್ಥಾನದಲ್ಲಿ ಇದ್ದಾರೆಂದು ಪಿಯು ಉಪ ನಿರ್ದೇಶಕರು ಲೋಕದರ್ಶನ ಪ್ರತಿನಿಧಿಗೆ ವಿವರಿಸಿದರು.
ಒಟ್ಟು ಫಲಿತಾಂಶ:
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಾಲೇಜುಗಳಿಂದ
ಕಲಾ ವಿಭಾಗದಲ್ಲಿ 3107 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2768 ಜನ ಪಾಸಾಗಿದ್ದಾರೆ. ಶೇ 89.09 ಫಲಿತಾಂಶ ಆಗಿದೆ.
ವಾಣಿಜ್ಯ ವಿಭಾಗದಲ್ಲಿ 5212 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4799 ಜನ ಪಾಸಾಗಿದ್ದಾರೆ. ಶೇ 92.08 ಫಲಿತಾಂಶ ಆಗಿದೆ.
ವಿಜ್ಞಾನ ವಿಭಾಗದಲ್ಲಿ 4917 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4678 ಜನ ಪಾಸಾಗಿದ್ದಾರೆ. ಶೇ 95. 14 ಫಲಿತಾಂಶ ಆಗಿದೆ. ಒಟ್ಟು ಮೂರು ವಿಭಾಗದಿಂದ 13236 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು , 12245 ಪಾಸಾಗಿದ್ದಾರೆ. ಶೇ. 92.51 ಫಲಿತಾಂಶ ಬಂದಿದೆ. ರಾಜ್ಯದಲ್ಲಿ ,ಜಿಲ್ಲೆ ನಾಲ್ಕನೇ ಸ್ಥಾನ ಪಡೆದರೂ, ಪಾಸಾದರ ಸಂಖ್ಯೆ ಈ ಸಲ ಹೆಚ್ಚಿದೆ ಎಂದರು .
ನಗರ ಪ್ರದೇಶದಲ್ಲಿ ಶೇ.93.13 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೆ. 90.31 ರಷ್ಟು ಪಾಸಾಗಿದ್ದಾರೆ ಎಂದರು.
ಕಾರವಾರ ಸರ್ಕಾರಿ ಪಿಯು ಕಾಲೇಜ್ ಸಾಧನೆ :
ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕಾರವಾರದ ಸರ್ಕಾರಿ ಪಿಯು ಕಾಲೇಜಿನಲ್ಲಿ 581 ವಿದ್ಯಾರ್ಥಿಗಳ ಪೈಕಿ 533 ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 94.6 ಪಾಸಾಗಿದ್ದಾರೆ. ಅಪೇಕ್ಷಾ ರೇವಣಕರ್ ಸೈನ್ಸ ವಿಭಾಗದಲ್ಲಿ 586 ಅಂಕಗಳಿಸಿ ಶೇ.97. 67 ಸಾಧನೆ ಮಾಡಿದ್ದಾಳೆ.
ಕಾಮರ್ಸ ವಿಭಾಗದಲ್ಲಿ ಸ್ವಯಂ ವರ್ಣೇಕರ್
578 ಅಂಕಗಳಿಸಿ ಶೇ 96. 33 ಸಾಧನೆ ಮಾಡಿದ್ದಾಳೆ.
ಕಲಾ ವಿಭಾಗದಲ್ಲಿ ಸಫಾ ಅಕ್ಬರ್ ಶೇಖ್ 575 ಅಂಕಗಳಿಸಿ ಶೆ.95. 83 ಸಾಧನೆ ಮಾಡಿದ್ದಾಳೆ ಎಂದು ಪ್ರಿನ್ಸಿಪಾಲ್ ರಮೇಶ್ ಪಾಟ್ನೇಕರ್ ತಿಳಿಸಿದ್ದಾರೆ.
…..




