ಬೀದರ್: ಜಿಲ್ಲಾಡಳಿತದ ವಿವಿಧ ಇಲಾಖೆಯಲ್ಲಿ ಅರ್ಜಿ ಆಹ್ವಾನ
ಬೀದರ್,ಅ.3:- ಡಾ.ಬಿ.ಆರ್.ಅಂಬೇಡ್ಕರ ಅಭಿವೃಧ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ವರ್ಗಗಳ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮೂದಾಯಗಳ ಅಭಿವೃದ್ದಿ ಕೋಶದಿಂದ ಸರ್ಕಾರ ಜಾರಿಗೆ ಜಾರಿಗೆ ತರುವ ಯೋಜನೆಗಳ ಅನುಷ್ಟಾನಕ್ಕೆ ಜಿಲ್ಲಾ ಮಟ್ಟದ ಸಮಿತಿ ಸದಸ್ಯರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ನಾಮ ನಿರ್ದೇಶಿತ ಸದಸ್ಯರನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುತಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮೂದಾಯಗಳ ಮುಖಂಡರು ಅಕ್ಟೋಬರ್ 11ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಗಾಗಿ ದೂರವಾಣಿ ಸಂಖ್ಯೆ; 08482-226191 ಗೆ ಸಂಪರ್ಕಿಸಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರ ಕ್ಷೇತ್ರದಲ್ಲಿನ ಸೇವೆಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ:- ಡಿಸೆಂಬರ್ 3ರಂದು ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟ ಸೇವೆ ಸಲ್ಲಿಸಿರುತ್ತಿರುವ ಇಲ್ಲವೇ ಸಲ್ಲಿಸಿರುವ ವಿಶೇಷ ಶೀಕ್ಷಕರಿಗೆ ಪ್ರತಿ ವರ್ಷವೂ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಆದ್ದರಿಂದ 2020ನೇ ಸಾಲ್ಲಿನ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಇಲ್ಲವೇ ಸಲ್ಲಿಸಿರುವ ವಿಶೇಷ ಶಿಕ್ಷಕರಿಗೆ ಪ್ರತಿ ವರ್ಷವೂ ರಾಜ್ಯ ಪ್ರಶಸ್ತಿಯ ಅರ್ಜಿಯ ನಿಗದಿತ ನಮೂನೆಯನ್ನು ಇಲಾಖೆಯ ವೇಬ್ಸೈಟ್ www.welfareofdisable.kar.nic.in ಅಥವಾ www.dwdsc.kar.nic.in ನಲ್ಲಿ ಪಡೆದು ಅಕ್ಟೋಬರ್ 12ರೊಳಗಾಗಿ ನಿಗದಿತ ಅರ್ಜಿ ಭರ್ತಿಮಾಡಿ ಈ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಬೀದರ ದೂರವಾಣಿ ಸಂಖ್ಯೆ: 08482-234647 ಸಂಪರ್ಕಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲೆಮಾರಿ, ಅರೆ ಅಲೆಮಾರಿ ಸಮುದಾಯವರಿಂದ ಅರ್ಜಿ ಆಹ್ವಾನ:- 2020-21ನೇ ಸಾಲಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಾಹಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಭೂ ಖರೀದಿ ಯೋಜನೆ ಮತ್ತು ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3) ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7) ಚಿತ್ರಕಥಿ-ಜೋಶಿ, 8)ಧೋಲಿ, 9)ಡವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೋಂದಳಿ, 15)ಹೆಳವ, 16)ಜೋಗಿ, 17)ಕೆಲ್ಕರಿ, 18)ಕೋಲ್ಹಾಟಿ, 19)ನಂದಿವಾಲ-ಜೋಶಿ-ಗೋಂದಳಿ, ಫುಲ್ಮಾಲಿ 20) ನಾಥಪಂಥಿ-ಡೌರಿ-ಗೋಸಾವಿ 21) ನಿರ್ತಿಕಾರಿ, 22) ಪಂಗುಲ್, 23)ಜೋಶಿ (ಸಾದ ಜೋಶಿ), 24)ಸನ್ಸಿಯ, 25)ಸರಾನಿಯ, 26)ತಿರುಮಲಿ, 27)ವ್ಶೆಡು, 28)ವಾಸುದೇವ್, 29)ವಡಿ, 30)ವಾಗ್ರಿ, 31)ವಿರ್, 32) ಬಜನಿಯ, 33)ಶಿಕ್ಕಲ್ಗಾರ, 34)ಗೊಲ್ಲ, 35)ಕಿಲ್ಲಕ್ಯಾತಸ್, 36)ಸರೋಡಿ, 37)ದುರ್ಗಾಮುರ್ಗ (ಬುರ್ಬುರ್ಚ), 38)ಹಾವಗಾರ್ (ಹಾವಾಡಿಗರ್), 39)ಪಿಚಗುಂಟಲ, 40) ಮಸನಿಯ ಯೋಗಿ, 41)(ಬೆಸ್ತರ್) ಬುಂಡ ಬೆಸ್ತ, 42)ಕಟಬು, 43)ದರ್ವೇಶ್, 44)ಕಾಶಿಕಪ್ಡಿ, 45)ದೊಂಬಿದಾಸ ಮತ್ತು 46)ಬೈಲ್ಪತ್ತಾರ್ ಸಮುದಾಯವರು ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಛೇರಿಗಳಲ್ಲಿ ಅಥವಾ ನಿಗಮದ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬೇಕು. ಮತ್ತು ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ ಮತ್ತು ಫೋಟೋವನ್ನು ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ದಾಖಲಾತಿಗಳು, ಗಂಗಾ ಕಲ್ಯಾಣ ನೀರಾವರಿ ಯೋಜನೆಯಲಿ ಸೌಲಭ್ಯ ಪಡೆಯಲು ಅರ್ಜಿದಾರರು ಹೊಂದಿರುವ ಜಮೀನಿನ ದಾಖಲಾತಿಗಳು ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರಗಳನ್ನು ಮತ್ತು ಭೂ ಖರೀದಿಗೆ ಸಂಬಂಧಿಸಿದಂತೆ ಜಾಮೀನುದಾರರ ಕಂದಾಯ ದಾಖಲೆಗಳು ನಿಗಮದ ವೆಬ್ಸೈಟ್ www.dbcdc.karnataka.gov.in ಮೂಲಕ ಅನ್ಲೈನ್ನಲ್ಲಿ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಲಾತಿಗಳೊಡನೆ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ನಂ. 9-8-175/5ಬಿ, ಬಿವ್ಹಿಬಿ ಕಾಲೇಜ್ ರಸ್ತೆ, ಮೈಲೂರ ಕ್ರಾಸ್, ಬಸವನಗರ, ಬೀದರ ಇಲ್ಲಿಗೆ 29-10-2020 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿ ಅಥವಾ ನಿಗಮದ ಮೇಲ್ಕಂಡ ವೆಬ್ಸೈಟ್ನಲ್ಲಿ ಸಂಪರ್ಕಿಸುವಂತೆ ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ(ನಿ) ಬೀದರನ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




