
ಬಿಜೆಪಿ ಅಭ್ಯರ್ಥಿ ಉತ್ತರ ಕನ್ನಡ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ :ಕಾಗೇರಿ ಅವರದ್ದು ಮುಚ್ಚಿಟ್ಟ ಹಿಂದುತ್ವ : ಸದಾನಂದ ಭಟ್
ಕಾರವಾರ : ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ . ಕಾಗೇರಿ ಹಿಂದುತ್ವ ಕಣ್ಣಿಗೆ ಕಾಣಿಸುವುದಿಲ್ಲ. ಅವರು ಪಕ್ಕಾ ಬಿಜೆಪಿಯ ಹಿಂದುತ್ವ ಎಂದು
ಜಿಲ್ಲಾ ಭಾಜಪ ಮಾಧ್ಯಮ ವಕ್ತಾರ ಸದಾನಂದ ಭಟ್ ಹೇಳಿದರು.
ಗುರುವಾರ ಕಾರವಾರ ಪತ್ರಿಕಾಭವನದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಶಿರಸಿಯ ಗ್ರಾಮೀಣ ಭಾಗದ ರಸ್ತೆಗಳನ್ನು ನೀವು ನೀಡಿ. ಅದು ಕಾಗೇರಿ ಮಾಡಿದ ಅಭಿವೃದ್ಧಿ. ಪರಿಸರವಾದಿಗಳ ಬಾಯಿ ಮುಚ್ಚಿಸಿ, ಶಿರಸಿ ಕುಮಟಾ ಹೆದ್ದಾರಿ ಅಗಲೀಕರಣ ಆಗಲು ಕಾಗೇರಿ ಕಾರಣಕರ್ತರು. ಅವರು ಕರಾವಳಿಯ ಜನರನ್ನು ನಿರ್ಲಕ್ಷಿಸಿಲ್ಲ. ಅವರು ಬಹಿರಂಗವಾಗಿ ಮತನಾಡದ ಹಿಂದುತ್ವವಾದಿ. ಅವರ ಸ್ಟೈಲ್ ಸಂಸದ ಅನಂತ ಕುಮಾರ್ ಶೈಲಿಯದ್ದಲ್ಲ. ಕಾಗೇರಿಯದು ಕಾಣಿಸಿಕೊಳ್ಳದ ಹಿಂದುತ್ವ ಎಂದು ಬಣ್ಣಿಸಿದರು. ಭಗವದ್ಗೀತೆ ಅಭಿಯಾನವನ್ನು ಕಾಗೇರಿ ಶಿಕ್ಷಣ ಸಚಿವರಾಗಿದ್ದಾಗಲೇ ಆರಂಭಿಸಿದ್ದು ಎಂದರು.
ವಿದ್ಯುತ್ ದರ ಏರಿದೆ. ನೀರಿನ ದರ ಏರಿದೆ. ಸ್ಟಾಂಪ ಪೇಪರ್ ಬೆಲೆ ಏರಿದೆ . ಮದ್ಯದ ಬೆಲೆ ಏರಿದೆ. ಎಲ್ಲಾ ದರ ಏರಿಸಿದ್ದಾರೆ. ಈ ನಡುವೆ
ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಆ ಗ್ಯಾರಂಟಿ ಸೌಲಭ್ಯ ಎಂಬುದು ಚಿಟಕೆ ಸಕ್ಕರೆ ಎಂದು ಭಟ್ ಅಪಾದಿಸಿದರು.
ಬಹಿರಂಗ ಚರ್ಚೆಗೆ ಸಿದ್ಧ :
ಜಿಲ್ಲೆಗೆ ಬಿಜೆಪಿ ಕೊಡುಗೆ ಏನು ? ಸಂಸದರ ಕೊಡುವೆ ಏನು ಎಂಬುದರ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಕಾಂಗ್ರೆಸ್ ನವರು ಸಮಯ ನಿಗದಿ ಮಾಡಲಿ ಎಂದು ಸದಾನಂದ ಭಟ್ ಸವಾಲು ಹಾಕಿದರು .
ಕೇಸರಿ ಪೇಟ ಧರಿಸಿದ್ದಕ್ಕೆ ಅಸಮಾಧಾನ:
2023 ರಲ್ಲಿ ಕೇಸರಿ ಪೇಟವನ್ನು ಅಂಜಲಿ ನಿಂಬಾಳ್ಕರ್ ವಿರೋಧಿಸಿದ್ದರು. 2024 ರಲ್ಲಿ ನಿಂಬಾಳ್ಕರ್ ಕೇಸರಿ ಪೇಟ ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಮೆರವಣಿಗೆಯಲ್ಲಿ ಕೇಸರಿ ಪೇಟ ಹಾಕಿದ್ದಾರೆ. ಇದರಿಂದ ಹಿಂದುಗಳು ಬದಲಾಗುವುದಿಲ್ಲ. ಅವರಿಗೆ ಬಿಜೆಪಿ ಮತಗಳು ಹೋಗಲ್ಲ ಎಂದು ಬಿಜೆಪಿಯ ಜಿಲ್ಲಾ ಘಟಕದ ವಿಶೇಷ ಆಹ್ವಾನಿತ ಸದಸ್ಯ ನಾಗರಾಜ್ ನಾಯಕ ಹೇಳಿದರು.
ಈಗ ಕಾಂಗ್ರೆಸ್ ನವರು ಕೇಸರಿ ಪೇಟ ಧರಿಸಿದ್ದಾರೆ. ಇದನ್ನು ಬಿಜೆಪಿ ಹಿಂದುತ್ವವಾದಿಗಳು ನಂಬಲ್ಲ ಎಂದರು. ಅನಂತ ಕುಮಾರ್ ಮನೆಯಲ್ಲಿ ಕುಳಿತೇ ಪಕ್ಷದ ಪ್ರಚಾರ ಮಾಡ್ತಿದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಪ್ರಚಾರಕ್ಕೆ ಬರ್ತಾರೆ ಎಂದರು.
ಎಂಇಎಸ್ ನಿಲುವಿಗೆ ಬಿಜೆಪಿ ಸಹಮತ ಇಲ್ಲ :
ಎಂಇಎಸ್ ಧೋರಣೆ ಹಾಗೂ ಕಾರವಾರ ,ಬೆಳಗಾವಿ ಕೇಳಿರುವುದನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ.ಕರ್ನಾಟಕದ ಒಂದಿಂಚು ನೆಲ ಮಹಾರಾಷ್ಟ್ರಕ್ಕೆ ಕೊಡುವುದಿಲ್ಲ . ಎಂಇಎಸ್ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಎಂದು ನಾಗರಾಜ್ ನಾಯಕ ಹೇಳಿದರು. ಸಂಜಯ್ ಸಾವಂತ,ಕಿಶನ್ ಕಾಂಬ್ಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
……..




