ಕಾರವಾರ ಜಿಲ್ಲೆಯಲ್ಲಿ ಗುರುವಾರ 5 ನಾಮಪತ್ರ ಸಲ್ಲಿಕೆ

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಬಯಸಿ 5 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಿದರು.‌ ಗುರುವಾರ ಜಿಲ್ಲೆಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ.

ರಾಷ್ಟ್ರೀಯ ಜನ ಸಂಭಾವನಾ ಪಕ್ಷದ ನಾಗರಾಜ ಶ್ರೀಧರ್ ಶೇಟ್, ಪಕ್ಷೇತರ ಅಭ್ಯರ್ಥಿಗಳಾಗಿ ಉಮೇಶ್ ದೈವಜ್ಞ, ಪ್ರಮೋದ್ ಮಡಗಾಂವಕರ್, ಅರವಿಂದ ಗೌಡ ಮತ್ತು ಸುಜಯ್ ಸುಧೀರ್ ಗೋಕರ್ಣ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 17 ಅಭ್ಯರ್ಥಿಗಳಿಂದ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದೆ. 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
……

Latest Indian news

Popular Stories