
ಗ್ರಾಮೋದ್ಯೊಗ ವಿಕಾಸ ಯೋಜನೆ- ಕುಂಬಾರ ಸಶಕ್ತಿಕರಣ ಪ್ರೋಗ್ರಾಮ
ಕುಂಬಾರಿಕೆ ಯಂತ್ರೋಪಕರಣಗಳ ವಿತರಣೆ ಕಾರ್ಯಕ್ರಮ
ಬೀದರ,ಏ.೩:- ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಕುಂಬಾರಿಕೆ ಬಗ್ಗೆ ದಿನಾಂಕ ೧೮-೩-೨೧ರಿಂದ ೨೮-೩-೨೦೨೧ರ ವರೆಗೆ ಕೌಶಲ್ಯ ತರಬೇತಿಯನ್ನು ಜರುಗಿಸಲಗಿದ್ದು, ದಿನಾಂಕ ೨೮-೩-೨೧ರಂದು ಗಾದಗಿ ಗ್ರಾಮದಲ್ಲಿ ತರಬೇತಿ ಪಡೆದ ೨೦ ಕಉಂಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆ.ವಿ.ಐ.ಸಿ) ಹುಬ್ಬಳಿ ಇವರಿಂದ ಕುಂಬಾರಿಕೆಯ ಯಂತ್ರೋಪಕರಣಗಳನ್ನು ಹಾಗೂ ತರಬೇತಿ ಪಡೆದ ಬಗ್ಗೆ ಪ್ರಮಾಣಪತ್ರವನ್ನು ಪ್ರಾಚಾರ್ಯರು ವಿ.ಪಿ.ಐ. ಖಾನಾಪೂರ ಶ್ರೀ ಪ್ರಭಾಕರ ಇವರಿಂದ ವಿತರಿಸಲಾಯಿತು. ಸಮಾರಂಭದಲ್ಲಿ ಆಯೋಗ ಅಧಿಕಾರಿಗಳಾದ ಸಹಾಯಕ ನಿರ್ದೆಶಕರಾದ ಶ್ರೀ ಮುರಲಿಧರ ಹಾಗೂ ರಾಮದಾಸ ಸಹಾಯಕ ನಿರ್ದೆಶಕರು ಉಪಸ್ಥಿತರಿದದರು.
ಖಾದಿ ಮತ್ತು ಗ್ರಾಮದ್ಯೋಗ ಸಂಘ ಬೀದರಿನ ಅಧ್ಯಕ್ಷರಾದ ಶ್ರೀ. ಡಿ.ವಿ. ಸಿಂದೋಲ ಮಾತನಾಡಿ ತರಬೇತಿ ಪಡೆದ ಕುಂಬಾರರು ಹೊಸ ಹೊಸ ಬಗೆ ಮಡಿಕೆಗಳನ್ನು ತಯಾರಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಸೂಚಿಸಿದರು. ಕಾರ್ಯಕ್ರಮದಲ್ಲಿ ನೌಬಾದ ಕುಂಬಾರರ ಕರಕುಶಲ ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಾಬುರಾವ ಕುಂಬಾರ ಕೋಳಾರ ಇವರು ಮಾತನಾಡಿ ದೇಶ ಜಿಲ್ಲೆಯ ಇನ್ನು ಹೆಚ್ಚಿನ ತರಬೇತಿ ಶಿಬಿರನವನ್ನು ನಿರ್ದರಿಸುವಂತೆ ಆರೋಗ ಅಧಿಕಾರಿಗಳಿಗೆ ಕೊರಿದರು. ಶ್ರೀ ಜಿ.ಎಸ್. ಪಾಟೀಲ ಕಾರ್ಯದರ್ಶಿಹಾಗೂ ಗ್ರಾಮೋದ್ಯೋಗ ಸಂಘ ಬೀದರ ನಬಿಖೂರುಷಿ ಸಿ.ಎಂ.ಸಿ. ಕೌಂಶಲರ, ಬಸವರಾಜ ಕುಂಬಾರ ರಘುನಾಥ ಕುಂಬಾರ, ಶಿವಕುಮಾರ ಕುಂಬಾರ ಹಾಗೂ ಮಲ್ಲಕಾರ್ಜುನ ಎಡೆ ಹಾಜರಿದ್ದರು.
ಧನ್ಯವಾದಗಳೋಂದಿಗೆ,
ಇತಿ ನಿಮ್ಮ ವಿಶ್ವಾಸಿ
ಬಾಬುರಾವ ಕುಂಬಾರ ಕೋಳಾರ
ಕುಂಬಾರರ ಕರಕುಶಲ ಕೈಗಾರಿಕಾ ಸಹಕಾರ
ಸಂಘ ನೌಬಾದ ಬೀದರ
ಮೋ: ೯೭೪೦೪೬೭೯೫೯




