Madikeri

ಹೊಸ್ಕೇರಿಯಲ್ಲಿ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆ ಯೋಜನೆ : ಕೊರವೇ ವಿರೋಧ : ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ ಏ.೧೨ : ಮಡಿಕೇರಿ ತಾಲ್ಲೂಕಿನ ಅರೆಕಾಡು ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಅಂತರರಾಷ್ಟಿçÃಯ ಮಟ್ಟದ ಶಿಕ್ಷಣ ಸಂಸ್ಥೆಯೊAದು ಸ್ಥಾಪನೆಗೊಳ್ಳುವ ಯೋಜನೆ ಪ್ರಗತಿಯಲ್ಲಿದೆ. ಗ್ರಾಮಸ್ಥರ ವಿರೋಧದಿಂದ ಎರಡೂವರೆ ವರ್ಷಗಳ ಹಿಂದೆ ಈ ಯೋಜನೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಪ್ರಭಾವಿಗಳ ಬೆಂಬಲದಿAದ ಕಾಮಗಾರಿ ಆರಂಭಗೊAಡಿದೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆ, ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಹೊಸ್ಕೇರಿ ಗ್ರಾಮದಲ್ಲಿ ಸುಮಾರು ೮೯ ಏಕರೆ ಕಾಫಿ ತೋಟವನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ದೆಹಲಿಯ ಖಾಸಗಿ ಸಂಸ್ಥೆಯೊAದು ಅರ್ಜಿ ಸಲ್ಲಿಸಿತ್ತು. ಸ್ಥಳೀಯ ಗ್ರಾಮಸ್ಥರು ಹಾಗೂ ಸೇವ್ ಹೊಸ್ಕೇರಿ ಸಂಘಟನೆಯ ಅಭಿಪ್ರಾಯಕ್ಕೆ ಗೌರವ ನೀಡದೆ ಗ್ರಾ.ಪಂ ನಿರಾಪೇಕ್ಷಣ ಪತ್ರ ನೀಡಿದೆ ಎನ್ನುವ ಆರೋಪವಿದೆ. ಸುಮಾರು ೨ ವರ್ಷಗಳಿಂದ ಅಂತರರಾಷ್ಟಿçÃಯ ಮಟ್ಟದ ಪರಿಸರ ಶಾಲೆ ನಿರ್ಮಿಸುವ ಕುರಿತು ಖಾಸಗಿ ಸಂಸ್ಥೆ ಪ್ರಯತ್ನ ನಡೆಸಿದ್ದು, ಇದೀಗ ದಿಢೀರ್ ಆಗಿ ನಿಯಮ ಬಾಹಿರ ಕಾಮಗಾರಿಗಳು ಆರಂಭಗೊAಡಿದೆ ಎಂದು ಆರೋಪಿಸಿದ್ದಾರೆ.
ಶಾಲೆ ನಿರ್ಮಾಣಗೊಂಡ ನಂತರ ಸುಮಾರು ಐನೂರು ವಿದ್ಯಾರ್ಥಿಗಳು ಮತ್ತು ಐನೂರು ಮಂದಿ ಸಿಬ್ಬಂದಿಗಳು ತಂಗಲಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಪರಿಸರದ ಬಗ್ಗೆ ಕಾಳಜಿ ಇಟ್ಟು ಪರಿಸರ ಶಾಲೆ ನಿರ್ಮಿಸುವ ಕುರಿತು ಮಾಹಿತಿ ನೀಡಿದೆ. ಆದರೆ ಸುಮಾರು ೮೯ ಏಕರೆ ಪ್ರದೇಶ ಭೂ ಪರಿವರ್ತನೆಯಾದರೆ ಕ್ರಮೇಣ ಸಂಸ್ಥೆ ಬೃಹತ್ ಕಟ್ಟಡಗಳನ್ನು ನಿರ್ಮಿಸದೆ ಇರಲು ಸಾಧ್ಯವಿಲ್ಲ.
ಕಳೆದ ಮೂರು ವರ್ಷಗಳ ಮಳೆಗಾಲದಲ್ಲಿ ಸಂಭವಿಸಿದ ಅನಾಹುತ ಮಾನವ ನಿರ್ಮಿತ ಎಂದು ವರದಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಈ ಪ್ರದೇಶದಲ್ಲಿ ಕಟ್ಟಡಗಳು ನಿರ್ಮಾಣಗೊಂಡರೆ ಗ್ರಾಮದ ಮೇಲೆ ದುಷ್ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿದೆ. ಈ ಶಾಲೆಯಿಂದ ಕೊಡಗು ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ, ಬದಲಿಗೆ ಗ್ರಾಮಾಂತರ ಪ್ರದೇಶದ ಪರಿಸರಕ್ಕೂ ಹಾನಿಯಾಗಲಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಪರಿಸರ ಕಾಳಜಿಯ ಶಿಕ್ಷಣ ಸಂಸ್ಥೆ ಇದಾಗಿದ್ದರೆ, ಐವತ್ತು ಏಕರೆ ಪ್ರದೇಶದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು ಯಾಕೆ ಎನ್ನುವ ಸಂಶಯ ಮೂಡುತ್ತದೆ. ಹೊಸ್ಕೇರಿ ಸಣ್ಣ ಗ್ರಾಮವಾಗಿದ್ದು, ಈ ದೊಡ್ಡ ಯೋಜನೆಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯವನ್ನು ನೀಡಲೇ ಬೇಕಾಗುತ್ತದೆ. ಇದರಿಂದ ಗ್ರಾಮಕ್ಕೆ ಧಕ್ಕೆಯಾಗಲಿದೆ. ಈ ಶಿಕ್ಷಣ ಸಂಸ್ಥೆ ಸ್ಥಾಪನೆಯ ಹಿಂದೆ ಹಣ ಮಾಡುವ ಉದ್ದೇಶ ಅಡಗಿದೆ ಎಂದು ಪವನ್ ಪೆಮ್ಮಯ್ಯ ಆರೋಪಿಸಿದ್ದಾರೆ.
ರತ್ನ ಕಮರ್ಷಿಯಲ್ ಸಂಸ್ಥೆಯಿAದ ಅರೆಕಾಡು ಹೊಸ್ಕೇರಿ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ವರ್ಲ್ಡ್ ಎನ್ವರ್ಮೆಂಟ್ ರೆಸಿಡೆನ್‌ಶಿಯಲ್ ಸ್ಕೂಲ್‌ಗಾಗಿ ಗುರುತಿಸಲಾದ ಪ್ರದೇಶ ಈ ಯೋಜನೆಗೆ ಸೂಕ್ತವಲ್ಲ ಎಂದು ಈಗಾಗಲೇ ಜಿಎಸ್‌ಐ ವರದಿ ನೀಡಿದೆ. ೨೦೧೮ ರಲ್ಲಿ ಸುರಿದ ಮಹಾಮಳೆಯ ಸಂದರ್ಭ ಯೋಜನೆಗೆ ನಿಗಧಿ ಪಡಿಸಿರುವ ಪ್ರದೇಶದ ಒಂದು ಬದಿಯಲ್ಲಿ ಗುಡ್ಡ ಕುಸಿದು ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಬೃಹತ್ ಕಟ್ಟಡಗಳಿಗಾಗಿ ನೈಜ ಪರಿಸರಕ್ಕೆ ದಕ್ಕೆ ಉಂಟು ಮಾಡಿದಲ್ಲಿ ಪ್ರಾಕೃತಿಕ ಅಸಮತೋಲನದಿಂದ ಮತ್ತೊಂದು ಅನಾಹುತ ಸಂಭವಿಸಬಹುದು ಎಂದು ತಿಳಿಸಿದ್ದಾರೆ.
ಇಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗುವುದಲ್ಲದೆ ೪ ಬೃಹತ್ ಆಟದ ಮೈದಾನಗಳು, ೨ ಹೆಲಿಪ್ಯಾಡ್, ಕೃತಕ ಜಲಪಾತ ಮತ್ತು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ರೀತಿಯ ಬೃಹತ್ ಕಾಮಗಾರಿ ಮತ್ತು ಯೋಜನೆಗಳಿಂದಾಗಿ ಜಲಮೂಲಗಳಿಗೆ ದಕ್ಕೆಯಾಗಿ ಸ್ಥಳೀಯ ಗ್ರಾಮಸ್ಥರಿಗೆ ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಬಹುದು.
ಯೋಜನೆಗೆಂದು ಮೀಸಲಿಟ್ಟ ಪ್ರದೇಶದ ಕೆಲವು ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಸೇವ್ ಹೊಸ್ಕೇರಿ ಸಂಘಟನೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಗಣಿಗಾರಿಕೆಯಿಂದ ಗ್ರಾಮಸ್ಥರ ಮನೆಗಳು ಬಿರುಕು ಬಿಟ್ಟಿವೆ. ಜನ ಒಂದು ಕೊಳವೆ ಬಾವಿ ಕೊರೆಸುವುದಕ್ಕೂ ನಿಯಮ, ನಿಬಂಧನೆಗಳನ್ನು ವಿಧಿಸಿ ಅಡ್ಡಿ ಪಡಿಸುವ ಇಲಾಖೆ ಇಷ್ಟು ದೊಡ್ಡ ಮಟ್ಟದಲ್ಲಿ ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.
ಈ ಪ್ರದೇಶದಲ್ಲಿ ನಿರಂತರವಾಗಿ ದ್ರೋನ್ ಹಾರಾಟ ನಡೆಸುತ್ತಿದ್ದು, ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಯೋಜನೆ ಬಗ್ಗೆ ಹಿಂದೆ ಲೋಕಾಯುಕ್ತರಿಗೆ ದೂರು ನೀಡಿದ ನಂತರ ವಿಚಾರಣೆ ನಡೆದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಇಳಿಜಾರು ಪ್ರದೇಶದಲ್ಲಿ ಶಾಲೆ ನಿರ್ಮಾಣ ಅಪಾಯಕ್ಕೆ ಆಹ್ವಾನ ಎನ್ನುವ ವರದಿ ನೀಡಿದ್ದಾರೆ. ಅಂತರರಾಷ್ಟಿçÃಯ ಮಟ್ಟದ ವಿಶಾಲವಾದ ನಾಲ್ಕು ಮೈದಾನಗಳು ಬೆಟ್ಟದ ಮೇಲೆ ನಿರ್ಮಾಣವಾದರೆ ಕೆಳಭಾಗದ ಗ್ರಾಮಸ್ಥರು ಮಹಾಮಳೆಯ ಸಂದರ್ಭ ಕುಸಿಯುವ ಭೀತಿಯನ್ನು ಎದುರಿಸಬೇಕಾಗುತ್ತದೆ. ಪ್ರಾಣ ಮತ್ತು ಆಸ್ತಿಗೆ ಹಾನಿಯಾಗುವ ಆತಂಕವಿದೆ. ಈ ಗ್ರಾಮದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಚಿಲಿಪಿಲಿ ಗುಹಾಂತರ ಶಿವಾಲವೊಂದು ಇದ್ದು, ಬೃಹತ್ ಯೋಜನೆಯಿಂದ ದೇವಾಲಯಕ್ಕೂ ದಕ್ಕೆಯಾಗುವ ಸಾಧ್ಯತೆಗಳಿದೆ ಎಂದು ಪವನ್ ಪೆಮ್ಮಯ್ಯ ಗಮನ ಸೆಳೆದಿದ್ದಾರೆ.
ಕೊಡಗಿನಲ್ಲಿ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಭೂ ಪರಿವರ್ತನೆ ಮಾಡದಂತೆ ಹೈಕೋರ್ಟ್ನ ತಡೆಯಾಜ್ಞೆ ಇದೆ. ಅಲ್ಲದೆ ಈ ಖಾಸಗಿ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಭೂಪರಿವರ್ತನೆ ಮಾಡದಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೃಪಾ ಕಟಾಕ್ಷದಿಂದ ಭೂಪರಿವರ್ತನೆಯಾಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಯೋಜನೆಯ ಪ್ರದೇಶದಲ್ಲಿ ನೂರಾರು ಮಂದಿ ಹೊರ ರಾಜ್ಯದ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪರಿಚಿತರಿಂದ ಅಪರಾಧ ಪ್ರಕರಣಗಳು ನಡೆಯುವ ಬಗ್ಗೆ ಗ್ರಾಮಸ್ಥರಲ್ಲಿ ಆತಂಕವಿದೆ. ಸಮೀಪದಲ್ಲಿ ಯಾವುದೇ ಪೊಲೀಸ್ ಠಾಣೆಗಳು ಕೂಡ ಇಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ತಕ್ಷಣ ನಿಯಮ ಬಾಹಿರ ಯೋಜನೆಗೆ ಸರ್ಕಾರ ತಡೆಯೊಡ್ಡಬೇಕು ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.
ತಪ್ಪಿದಲ್ಲಿ ಅರೆಕಾಡು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಗ್ರಾಮಸ್ಥರೊಂದಿಗೆ ಪಾದಯಾತ್ರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಫೋಟೋ :: ಪವನ್ ಪೆಮ್ಮಯ್ಯ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button