ನಿಯಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಮನವಿ
ಬೀದರ ಏಪ್ರೀಲ್ ೧೪ (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಮಾಡುತ್ತಿರುವ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು, ಮುಖಂಡರು, ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವ ವೇಳೆಯಲ್ಲಿ ಕೋವಿಡ್-೧೯ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಬಸವಕಲ್ಯಾಣ ಉಪಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ವೇಳೆಯಲ್ಲಿ ರಾಜಕೀಯ ಪಕ್ಷಗಳು ಮುಖಂಡರು, ಅಭ್ಯರ್ಥಿಗಳು.
ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರಚಾರ ಸಭೆಗಳು ಸೇರಿದಂತೆ ಪ್ರಚಾರ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಸ್ಯಾನಿಟೈಜರ್ ಬಳಸಬೇಕು ಹಾಗೂ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ನಿಯಮಗಳನ್ನು ಪಾಲಿಸಿ, ಚುನಾವಣಾ ಪ್ರಚಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಮತದಾನ ದಿನದಂದು ನಾನಾ ಚಟುವಟಿಕೆಗಳು
ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿಗಳ ಸೂಚನೆ
ಬೀದರ ಏಪ್ರೀಲ್ ೧೪ (ಕರ್ನಾಟಕ ವಾರ್ತೆ): ಏಪ್ರೀಲ್ ೧೭ರಂದು ನಡೆಯುವ ೪೭-ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ಮತದಾನ ದಿನದಂದು ವಿವಿಧ ಕಾರ್ಯಚಟುವಟಿಕೆಗಳಿಗೆ ನೇಮಕಗೊಂಡ ಎಲ್ಲ.
ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯವನ್ನು ಕಾಳಜಿಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಸಭಾಂಗಣದಲ್ಲಿ ಏಪ್ರಿಲ್ ೧೪ರಂದು ನಡೆದ ಪೋಲಿಂಗ್ ಡೇ ಮಾನಿಟರಿಂಗ್ ಟೀಂಗಳಲ್ಲಿರುವ ಅಧಿಕಾರಿಗಳಿಗೆ ನಡೆದ ತರಬೇತಿಯಲ್ಲಿ ಅವರು ಮಾತನಾಡಿದರು.
ಏಪ್ರೀಲ್ ೧೭ರಂದು ಮತಗಟ್ಟೆ ಕೇಂದ್ರಗಳಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಮತದಾನದ ಅಂಕಿ ಅಂಶಗಳ ಮಾಹಿತಿ ಮತ್ತು ಇನ್ನೀತರ ಮಾಹಿತಿಯನ್ನು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸಕಾಲಕ್ಕೆ ಸಲ್ಲಿಸಲು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ನೋಡಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮತದಾನ ದಿನದಂದು ಎಲ್ಲಾ ಮತಗಟ್ಟೆಗಳ ಸಿದ್ಧತೆಯ ಬಗ್ಗೆ ಬೆಳಗ್ಗೆ ೫.೩೦ರೊಳಗೆ ವರದಿ ಮಾಡಬೇಕು. ೬.೩೦ರೊಳಗೆ ಅಣುಕು ಮತದಾನ ನಡೆದ ಬಗ್ಗೆ ವರದಿ ನೀಡಬೇಕು.
ನಮೂನೆ ೪೭ರ ಮೂಲಕ ಮತದಾನ ದಿನದ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ವಿಶೇಷ ವರದಿ ಸಲ್ಲಿಸಬೇಕು.
೨೬ ಸೆಕ್ಟರ್ ಅಧಿಕಾರಿಗಳಿಂದ ಪೋಲ್ ಕ್ಲೋಸರ್ ವರದಿ ಪಡೆದು ಸಕಾಲಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು. ಮತದಾನ ನಡೆಯುವ ಹಿಂದಿನ ದಿನದ.
೨೪ ಗಂಟೆಗಳ ಎಸ್ಓಪಿ ವರದಿಯನ್ನು ಏಪ್ರಿಲ್ ೧೬ ರಂದು ಸಲ್ಲಿಸಲು ಸಂಬAಧಿಸಿದ ನೊಡಲ್ ಅಧಿಕಾರಿಗಳಿಗೆ ತಿಳಿಸಲಾಯಿತು
ಪ್ರತಿ ಮತಗಟ್ಟೆಗಳಿಗೆ ಓಆರ್ಎಸ್ ಪ್ಯಾಕೇಟ್ ಸೇರಿದಂತೆ ೩೫೦ ಮೆಡಿಕಲ್ ಕಿಟ್ಗಳ ವ್ಯವಸ್ಥೆ ಮಾಡಿಸಬೇಕು. ಮಸ್ಟರಿಂಗ್ ಸೆಂಟರನಲ್ಲಿ.
ಯಾವುದೇ ರೀತಿಯ ವಿದ್ಯುತ್ ವ್ಯತ್ಯಯವಾಗದಂತೆ ಜೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮತದಾನ ದಿನದಂದು ದಾಖಲಾಗುವ ಶೇಖಡಾವಾರು ಮತದಾನದ ವಿವರವನ್ನು ಕಾಲಕಾಲಕ್ಕೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ವಾರ್ತಾಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು.
ಒಟ್ಟು ಮತಗಟ್ಟೆಗಳ ಪೈಕಿ ೧೭೨ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರು ಇರುವುದನ್ನು ಗುರುತಿಸಲಾಗಿದೆ. ಅಲ್ಲಿ ವೀಲ್ ಚೇರ್ ಗೆ ಮತ್ತು ವಾಹನದ ವ್ಯವಸ್ಥೆ ಮಾಡಲು ತಮ್ಮ ಹಂತದಲ್ಲಿ ಕ್ರಮ ವಹಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ, ತಹಸೀಲ್ದಾರರಾದ ನಾಗಯ್ಯ ಹಿರೇಮಠ, ಅಣ್ಣಾರಾವ್ ಪಾಟೀಲ, ಜಯಶ್ರೀ, ಪೌರಾಯುಕ್ತರಾದ ಗೌತಮ ಕಾಂಬಳೆ, ಜಿಪಂ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ ಹಾಗೂ ಇತರರು ಇದ್ದರು.




