
Udupi
ಮಲ್ಪೆ: ಕಿಡ್ನಾಪ್ ಪ್ರಕರಣ ದಾಖಲು
ಮಲ್ಪೆ: ಜು 11 ರಂದು ಬೆಳಿಗ್ಗೆ ಆಶಾಲತಾ(62) ಬೈಲೂರು, ಉಡುಪಿ ಇವರಿಗೆ ತಲೆ ತಿರುಗುತ್ತಿದ್ದು, ಈ ಬಗ್ಗೆ ಅವರ ಮಗಳಾದ ದೀಕ್ಷಾಳಲ್ಲಿ ಹೇಳಿಕೊಂಡಿದ್ದಾರೆ. ಆಗ ದೀಕ್ಷಾ ಅವರಿಗೆ ಮಲಗಲು ಹೇಳಿರುತ್ತಾಳೆ.ಅದರಂತೆ ತಮ್ಮ ರೂಮ್ನಲ್ಲಿ ಮಲಗಿದ್ದು, ಮಧ್ಯಾಹ್ನ 3 ಗಂಟೆ ಸಮಯಕ್ಕೆ ಎಚ್ಚರವಾದಾಗ ಮಗಳನ್ನು ಕರೆದಿದ್ದು, ಮನೆಯಲ್ಲಿ ನೋಡಿದಾಗ ಮಗಳು ದೀಕ್ಷಾ ಮನೆಯಲ್ಲಿ ಇರುವುದಿಲ್ಲ. ಈ ಬಗ್ಗೆ ದಿನಾಲು ಮಗಳನ್ನು ಶಾಲೆಗೆ ಬಿಡುತ್ತಿದ್ದ ರಿಕ್ಷಾ ಡ್ರೈವರ್ರಲ್ಲಿ ವಿಚಾರಿಸಿದ್ದು, ಶಾಲೆಗೆ ಹೋಗಿಲ್ಲದಿರುವುದು ತಿಳಿಸಿರುತ್ತಾರೆ.ಸಂಬಂಧಿಕರಲ್ಲಿ ವಿಚಾರಿಸಿದ್ದು, ಅಲ್ಲಿಗೂ ಬಂದಿಲ್ಲದಿರುವುದು ತಿಳಿಯುತ್ತದೆ. ಈ ಬಗ್ಗೆ ಆಶಾಲತಾರವರು ನನ್ನ ಮಗಳು ದೀಕ್ಷಾಳನ್ನು ಯಾರೋ ದುರುದ್ದೇಶದಿಂದ ಕಿಡ್ನಾಫ್ ಮಾಡಿರುವ ಸಂದೇಹ ಇರುವ ಬಗ್ಗೆ ನೀಡಿರುವ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/24 U/s. 137(2) BNS ರಂತೆ ಪ್ರಕರಣ ದಾಖಲಿಕೊಳ್ಳಲಾಗಿದೆ.




