
ಪಿಡಿಎಫ್ ಜನಕ ಚಾರ್ಲ್ಸ್ ಇನ್ನಿಲ್ಲ
ಓಹಿಯೊ (ಅಮೆರಿಕ): ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್, ಫೋಟೋಶಾಪ್ನಂತಹ ಹಲವಾರು ಸಾಫ್ಟ್ವೇರ್ಗಳನ್ನು ಅಭಿವೃದ್ಧಿಪಡಿಸಿರುವ ವಿಶ್ವಪ್ರಸಿದ್ಧ ಅಡೋಬ್ ಕಂಪೆನಿಯ ಸಹಸಂಸ್ಥಾಪಕ ಚಾರ್ಲ್ಸ್ ಚುಕ್ಗೆಶ್ಕೆ ಇನ್ನಿಲ್ಲ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮೆಟ್ಗೆ (ಪಿಡಿಎಫ್)ಪರಿವರ್ತಿಸುವ ತಂತ್ರಾAಶವನ್ನು ಅಭಿವೃದ್ಧಿಪಡಿಸಿದ್ದರು. ಪಿಡಿಎಪ್ನಂತಹ ಸಾಫ್ಟ್ವೇರ್ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ.
ಪಿಡಿಎಫ್ ಸಾಫ್ಟ್ವೇರ್ ಬಂದ ಬಳಿಕ ಬರಹ ಹಾಗೂ ಚಿತ್ರಗಳನ್ನು ಪೇಪರ್ ಮೇಲೆ ಪ್ರಿಂಟ್ ಮಾಡುವುದು ಅತ್ಯಂತ ಸುಲಭವ ವಿಧಾನ ಎನಿಸಿಕೊಂಡಿತು. ಈ ಮೂಲಕ ಪಿಡಿಎಫ್ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಯಿತು. ಚಾರ್ಲ್ಸ್ ಅಡೋಬ್ ಸಾಫ್ಟ್ವೇರ್, ಪಿಡಿಎಫ್, ಅಕ್ರೋಬಾಟ್, ಇಲ್ಯುಸ್ಪ್ರೇಟರ್, ಪ್ರೀಮಿಯರ್ ಪ್ರೋ ಮತ್ತು ಫೋಟೊಶಾಪ್ನಂತಹ ಜನಪ್ರಯಿ, ಉಪಯುಕ್ತ ಅಪ್ಲಿಕೇಶನ್ಗಳನ್ನು ಕಂಡುಹಿಡಿದಿದ್ದಾರೆ.
ಚುಕ್ಗೆಶ್ಕೆ 1982ರಲ್ಲಿ ವರ್ನಾಕ್ ಅಡೋಬ್ ಸಾಫ್ಟ್ವೇರ್ ಕಂಪನಿಯನ್ನು ಸ್ಥಾಪಿಸಿದ್ದರು. 1990ರ ದಶಕದಲ್ಲಿ ಪಿಡಿಎಫ್ ಫಾರ್ಮೆಟ್ ಅಭಿವೃದ್ಧಿಪಡಿಸಿದ್ದರು. ಅವರ ನಿಧನ ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಅಡೋಬ್ ಸಿಇಒ ಶಂತನು ನಾರಾಯಣ್ ಸಂತಾಪ ವ್ಯಕ್ತಪಡಿಸಿದ್ದಾರೆ.




