ಕುಂದಾಪುರ: ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಲಾರಿ;ಓರ್ವ ವಿದ್ಯಾರ್ಥಿ ಗಂಭೀರ;ಹಲವರಿಗೆ ಗಾಯ

ಕುಂದಾಪುರ: ಖಾಸಗಿ ಬಸ್ಸಿಗೆ ಲಾರಿಯೊಂದು ಹಿಂದಿನಿಂದ ರಭಸವಾಗಿ ಬಂದು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರಿನ ಪ್ರವಾಸಿ ಹೋಟೆಲ್ ಎದುರು ಆ.10ರ ಶನಿವಾರ ಬೆಳಗ್ಗೆ ಸಂಭವಿಸಿದೆ.

IMG 20240810 WA0028 Accident News, KUNDAPURA

ಅಪಘಾತದ ಪರಿಣಾಮ ಬಸ್ಸಿಲ್ಲಿದ್ದ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, 7-8 ಮಂದಿ ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯವಾಗಿದೆ. ಲಾರಿಯ ಚಾಲಕ, ನಿರ್ವಾಹಕ ಕೂಡಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಬೈಂದೂರಿಂದ ಕುಂದಾಪುರಕ್ಕೆ ಬರುತ್ತಿತ್ತು. ಅಪಘಾತದ ತೀವ್ರತೆಗೆ ಬಸ್ಸಿನ ಹಿಂಬದಿ ಹಾಗೂ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.

Latest Indian news

Popular Stories