2023ರಲ್ಲಿ ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತ, 184 ಕೋಟಿ ರೂ ಟ್ರಾಫಿಕ್ ದಂಡ ಸಂಗ್ರಹ

ಬೆಂಗಳೂರು: 2023ರಲ್ಲಿ ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 909 ಮಂದಿ ಸಾವಿಗೀಡಾಗಿದ್ದಾರೆ.

ಹೌದು.. ಕಳೆದ ವರ್ಷದ ಸಂಚಾರ ಪೊಲೀಸ್ ವಿಭಾಗಕ್ಕೆ ಸಂಬಂಧಿಸಿದ ವಿವರಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ 880 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 909 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ನಗರದಲ್ಲಿ 4,095 ಮಾರಣಾಂತಿಕವಲ್ಲದ ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 4,201 ಜನರು ಗಾಯಗೊಂಡಿದ್ದಾರೆ.

ಮುಖಾಮುಖಿ ಢಿಕ್ಕಿ ಅಪಘಾತಗಳಲ್ಲಿ 2,49,624 ಪ್ರಕರಣಗಳು ದಾಖಲಾಗಿದ್ದರೆ, ಮುಖಾಮುಖಿಯಲ್ಲದ ಅಪಘಾತಗಳಲ್ಲಿ 87,25,321 ಪ್ರಕರಣಗಳು ದಾಖಲಾಗಿವೆ. ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ರಚಿಸಲಾದ ಗ್ರೀನ್ ಕಾರಿಡಾರ್‌ಗಳ ಸಂಖ್ಯೆ 22 ಆಗಿದ್ದು, ನಗರದ ಸಂಚಾರ ಪೊಲೀಸರು 2023ರಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಾಗಿ 184.83 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ.

ಕಳೆದ ವರ್ಷ ಟ್ರಾಫಿಕ್ ಪೊಲೀಸರು ಸುಮಾರು 7,055 ಕುಡಿದು ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಪಘಾತಗಳು, ಕುಡಿದು ವಾಹನ ಚಲಾಯಿಸುವ ಪರಿಣಾಮವಾಗಿ ಸುಮಾರು 16 ಮಂದಿ ಸಾವಿಗೀಡಾಗಿದ್ದಾರೆ.

Latest Indian news

Popular Stories