ಹಾಸನ: ಲಾರಿಗೆ ಬೈಕ್ ಡಿಕ್ಕಿ ಇಬ್ಬರು ಮೃತ್ಯು


ಹಾಸನ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ತಾಲ್ಲೂಕಿನ, ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ಅಶ್ವತ್ಥ್ (42), ಸಾಗರ್ (42) ಮೃತ ದುರ್ದೈವಿಗಳು.

ಆಶ್ವತ್ಥ್ , ಅರಕಲಗೂಡು ತಾಲ್ಲೂಕಿನ, ಚಿಕ್ಕ ಆಲದಹಳ್ಳಿ ಗ್ರಾಮದವರಾಗಿದ್ದು ಹಾಗೂ ಸಾಗರ್ ಆಲದಹಳ್ಳಿ ಗ್ರಾಮದವರಾಗಿದ್ದಾರೆ. , ಚಾಲಕ ಹಾಗೂ ನಿರ್ವಾಹಕ ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಬದಿ ಟ್ರಕ್ ನಿಲ್ಲಿಸಿಕೊಂಡು ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ, ಚನ್ನರಾಯಪಟ್ಟಣದ ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಬೈಕ್ ಸವಾರರು, ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದ
ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿನೀಡಿ, ಪರಿಶೀಲನೆ ನಡೆಸಿದ್ದಾರೆ

Latest Indian news

Popular Stories