ಅಹಮದಬಾದ್ : ಟ್ರಕ್ ಗೆ ಗುದ್ದಿದ ಕಾರು – 10 ಮಂದಿ ದುರ್ಮರಣ

ಗಾಂಧಿನಗರ: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ನದಿಯಾಡ್‌ ನಗರದ ಬಳಿಯ ಅಹಮದಾಬಾದ್‌-ವಡೋದರ ಎಕ್ಸ್‌ಪ್ರೆಸ್‌ವೇನಲ್ಲಿ (Ahmedabad-Vadodara Expressway) ಟ್ರಕ್‌ಗೆ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಎಲ್ಲ 10 ಜನ ಮೃತಪಟ್ಟಿದ್ದಾರೆ.

ಅತಿಯಾದ ವೇಗದಲ್ಲಿದ್ದ ಕಾರು ಟ್ರಕ್‌ಗೆ ಹಿಂಬದಿಯಿಂದ ಗುದ್ದಿದ ಕಾರಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ 8 ಜನ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಡೋದರದಿಂದ ಎರ್ಟಿಗಾ ಕಾರು ಅಹಮದಾಬಾದ್‌ಗೆ ತೆರಳುತ್ತಿತ್ತು. ವೇಗವಾಗಿ ಚಲಿಸುವ ವೇಳೆ, ಹೈವೇ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ಗೆ ಹಿಂಬದಿಯಿಂದ ಗುದ್ದಿದೆ. ರಭಸವಾಗಿ ಚಲಿಸುತ್ತಿದ್ದ ಕಾರು ನಿಂತಿದ್ದ ಟ್ರಕ್‌ಗೆ ಗುದ್ದಿದ ಪರಿಣಾಮ ಕಾರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. 8 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂಬುದಾಗಿ ನದಿಯಾಡ್‌ ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಇನ್ಸ್‌ಪೆಕ್ಟರ್‌ ಕಿರಿತ್‌ ಚೌಧರಿ ಮಾಹಿತಿ ನೀಡಿದ್ದಾರೆ.

Latest Indian news

Popular Stories