ಲೈಂಗಿಕ ದೌರ್ಜನ್ಯ ಆರೋಪ: ಮೇ 3 ರಂದು ಜರ್ಮನಿಯಿಂದ ಪ್ರಜ್ವಲ್​ ರೇವಣ್ಣ ರಾಜ್ಯಕ್ಕೆ ವಾಪಸ್​ ಸಾಧ್ಯತೆ

ಬೆಂಗಳೂರು, ಮೇ 01: ಮಹಿಳೆಯರ ಮೇಲೆ ಲೈಗಿಂಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna )ಸದ್ಯ ವಿದೇಶ ಪ್ರವಾಸದಲ್ಲಿದ್ದು, ಶುಕ್ರವಾರ (ಮೇ 03)ರ ಮಧ್ಯರಾತ್ರಿ ರಾಜ್ಯಕ್ಕೆ ಮರಳಲಿದ್ದಾರೆ.

ಪ್ರಜ್ವಲ್​ ರೇವಣ್ಣ ಅವರು ಜರ್ಮನಿಯ ಫ್ರಾಂಕ್​ಫರ್ಟ್ (Germany) ತೆರಳಿದ್ದು, ಬೆಂಗಳೂರಿಗೆ ರಿಟರ್ನ್​ ಟಿಕೆಟ್ ಬುಕ್​ ಮಾಡಿದ್ದಾರೆ. ಮೇ3 ರಂದು ಮಧ್ಯಾಹ್ನ 1.30ಕ್ಕೆ ವಿಮಾನ ಫ್ರಾಂಕ್​ಫರ್ಟ್​ನಿಂದ ಹೊರಡಲಿದ್ದು,​​ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸಲಿದ್ದಾರೆ.

Latest Indian news

Popular Stories