ವಿರಾಜಪೇಟೆಯ ಬಿಟ್ಟಂಗಾಲ ಬಳಿ ಬೈಕ್ ಅಪಘಾತ ಯುವಕ ಮೃತ್ಯು

ಪೊನ್ನಂಪೇಟೆ ತಾಲೂಕಿನ ಕೋತುರು ನಿವಾಸಿ ಸತೀಶ್ ಅವರ ಪುತ್ರ ಶ್ರವಣ್ (20) ವಿರಾಜಪೇಟೆ ನಗರಕ್ಕೆ ಆಗಮಿಸಿ ಬೈಕ್ ನಲ್ಲಿ ಮರಳಿ ಹೋಗುವ ಸಂದರ್ಭದಲ್ಲಿ ಬಿಟ್ಟಾಂಗಾಲ ರಸ್ತೆಯ ಬಳಿ ತಿರುವಿನಲ್ಲಿ ನಾಮ ಫಲಕಕ್ಕೆ ಡಿಕ್ಕಿ ಹೊಡೆದು ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟಾಗಿ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಅದೇ ಮಾರ್ಗವಾಗಿ ಬರುತ್ತಿದ್ದ ಕೇಬಲ್ ಸಂತೋಷ್ ಅವರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತನ್ನ ವಾಹನದಲ್ಲಿ ತೆಗೆದುಕೊಂಡು ಬಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗೊಂಡ ಹಿನ್ನೆಲೆಯಲ್ಲಿ ಶ್ರವಣ್ ಮೃತ ಪಟ್ಟಿದ್ದಾರೆ, ಎಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಧೃಡಪಡಿಸಿದ್ದಾರೆ..

Latest Indian news

Popular Stories