ಮುರ್ಸಿಯಾ ದ ನೈಟ್ ಕ್ಲಬ್ ನಲ್ಲಿ ಭಾರೀ ಅಗ್ನಿ ಅವಘಡ : 13 ಜನ ಮೃತ್ಯು

ಸ್ಪೇನ್ :ಮುರ್ಸಿಯಾ ದ ನೈಟ್ ಕ್ಲಬ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.ಅಟಲಾಯಸ್‌ ನ ಹೊರವಲಯದಲ್ಲಿರುವ ಟೀಟರ್ ನೈಟ್‌ ಕ್ಲಬ್‌ ನಲ್ಲಿ ಭಾನುವಾರ ಬೆಂಕಿ ಹೊತ್ತಿಕೊಂಡಿದೆ.

ಮುರ್ಸಿಯಾ ಅಗ್ನಿಶಾಮಕ ದಳದವರು ನೈಟ್‌ ಕ್ಲಬ್‌ ನೊಳಗೆ ಜ್ವಾಲೆಗಳನ್ನು ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.ಮುರ್ಸಿಯಾ ಮೇಯರ್ ಜೋಸ್ ಬಲ್ಲೆಸ್ಟಾ ಅವರು, ಅಟಲಯಾಸ್ ನೈಟ್‌ ಕ್ಲಬ್‌ ನೊಳಗಿನ ಸಾವಿನ ಸಂಖ್ಯೆ 13ಕ್ಕೆ ಏರಿದೆ ಎಂದು ಬಹಿರಂಗಪಡಿಸಿದರು, ರಕ್ಷಣಾ ಸಿಬ್ಬಂದಿ ಇನ್ನೂ ಕಾಣೆಯಾದ ಹಲವಾರು ಜನರಿಗಾಗಿ ಹುಡುಕುತ್ತಿದ್ದಾರೆ.

ಆರಂಭದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಆದರೆ, ನಂತರ ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಯಿತು ಎಂದು ಬಲ್ಲೆಸ್ಟಾ ಹಂಚಿಕೊಂಡಿದ್ದಾರೆ. ದುರಂತ ಬೆಂಕಿಯ ಕಾರಣವನ್ನು ನಿರ್ಧರಿಸಲು ತುರ್ತು ಸೇವೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಘಟನೆಯಲ್ಲಿ ಗಾಯಗೊಂಡವರು, ಹೊಗೆಯಿಂದ ಅಸ್ವಸ್ಥರಾದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Indian news

Popular Stories