ಹೆಬ್ರಿ: ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ – ಯುವಕ ಮೃತ್ಯು

ಹೆಬ್ರಿ: ಚಾರ ಗ್ರಾಮದ ಕನ್ಯಾನ ಶಾಲೆಯ ಬಳಿ ಡಿ.31ರಂದು ರಾತ್ರಿ ವೇಳೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಜಯಂತ ಬೋರೋ(25) ಮೃತ ವ್ಯಕ್ತಿ.

ಕನ್ಯಾನ ಕಡೆಯಿಂದ ಶಿವಪುರ ಕಡೆಗೆ ಬರುತ್ತಿದ್ದ ಕಾರು ರಸ್ತೆ ಬದಿ ಇತರರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಜಯಂತ್ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories