ತುಮಕೂರಿನಲ್ಲಿ ಹೊತ್ತಿಯುರಿದ ಚಲಿಸುತ್ತಿರುವ ಕಾರು

ತುಮಕೂರು:ಇತ್ತೀಚೆಗೆ ಚಲಿಸುತ್ತಿದ್ದಾಗಲೇ ಕಾರುಗಳು ಹೊತ್ತಿ ಉರಿದು ಬೆಂಕಿಗಾಹುತಿ ಆಗುತ್ತಿವೆ.ಬೆಂಗಳೂರಿನಲ್ಲಿ ಕೂಡ ಕಾರು ರೋಡಿನಲ್ಲಿ ಬೆಂಕಿಗಾಹುತಿ ಆಹುತಿಯಾಗಿತ್ತು.

ಈಗ ಇಂತಹದ್ದೇ ಘಟನೆ ನಡೆದಿದೆ. ಅದೂ ನಡೆದಿದ್ದು ತುಮಕೂರಿನಲ್ಲಿ.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೊಸಪಾಳ್ಯ ಗೇಟ್ ಹತ್ತಿರ ಕಾರೊಂದು ಚಲಿಸುತ್ತಿದ್ದಾಗಲೇ ಬೆಂಕಿಗಾಹುತಿ ಆಗಿ ಸುಟ್ಟು ಹೋಗಿದೆ.

ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಅದರಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸುಟ್ಟು ಹೋಗಿತ್ತು. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.

Latest Indian news

Popular Stories