ವಿಜಯಪುರ :ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬಾಲಕಿ ಸ್ಥಳದಲ್ಲೇ ಸಾವು ತಂದೆಗೆ ಗಂಭೀರ ಗಾಯ

ವಿಜಯಪುರ : ಬೈಕ್ ಗೆ ಮಹಾರಾಷ್ಟ್ರ ಸಾರಿಗೆ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇಬಾಲಕಿ ಮೃತಪಟ್ಟಿದ್ದು ತಂದೆ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಬಾಲಕಿಯನ್ನು ಸವಿತಾ ಪೂಜಾರಿ (15)ಎಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.MH 13 CU 6886 ನಂಬರಿನ ಮಹಾರಾಷ್ಟ್ರದ ಸರ್ಕಾರಿ ಬಸ್ ಎಂದು ಹೇಳಲಾಗುತ್ತಿದ್ದು, ಸಾರಿಗೆ ಬಸ್ ಚಾಲಕನನ್ನು ತಿಕೋಟ ಠಾಣೆ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣವಾಗಿದೆ.

Latest Indian news

Popular Stories