ಜಾರ್ಖಂಡ್: ಡಿವೈಡರ್‌ಗೆ ಕಾರು ಡಿಕ್ಕಿ , 6 ಮಂದಿ ಮೃತ್ಯು

ಜಾರ್ಖಂಡ್‌: ಕಾರೊಂದು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದ
ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ಬಿಸ್ತೂಪುರ್‌ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕ್ಯೂಟ್ ಹೌಸ್ ಸ್ಕ್ವೇರ್‌ನಲ್ಲಿ ನಡೆದಿದೆ.

ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
5 ಸೀಟಿನ ಕಾರಿನಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು. ಮೊದಲಿಗೆ ರಸ್ತೆಯ ಡಿವೈಡರ್‌ಗೆ ಗುದ್ದಿದ ಕಾರು, ಬಳಿಕ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದಿದೆ. 5 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ’ ಎಂದು ಜೆಮ್‌ಶೆಡ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಕೌಶಲ್ ಕಿಶೋರ್ ತಿಳಿಸಿದ್ದಾರೆ.

Latest Indian news

Popular Stories