
Accident NewsKodagu
ಕೊಡಗು | ಹೋಟೆಲ್ ಗೆ ನುಗ್ಗಿದ ಟ್ಯಾಂಕರ್
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ಇದ್ದಕ್ಕಿದ್ದಂತೆ ಅಂಗಡಿಯೊಳಗೆ ನುಸುಲಿರುವ ಘಟನೆ ವರದಿಯಾಗಿದೆ. ನೆನ್ನೆ ನಡು ರಾತ್ರಿ 1 ಗಂಟೆ ಸಮಯದಲ್ಲಿ ಕುಶಾಲನಗರ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದಲ್ಲಿ (ಮಸೀದಿ ಸಮೀಪ) ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹಂಸ ಎಂಬುವವರ ಹೋಟೆಲ್ ಒಳಗೆ ನುಗ್ಗಿ ನಿಂತುಕೊಂಡಿದೆ.
ಇದರಿಂದಾಗಿ ಹೋಟೆಲ್ ನ ಮುಂಭಾಗ ಸಂಪೂರ್ಣವಾಗಿ ಹಾಗೂ ಅದರ ಒತ್ತಿನಲ್ಲಿರುವ ಕೆ. ಕೆ. ಸೌಂಡ್ಸ್ ಶಾಮಿಯಾನದ ಅಂಗಡಿ ಹಾನಿಗೊಳಗಾಗಿವೆ. ಅದೃಷ್ಟವಶಾತ್ ಹೋಟೆಲ್ ಮತ್ತು ಕೆ. ಕೆ. ಸೌಂಡ್ಸ್ ಶಾಮಿಯಾನದ ಅಂಗಡಿಯೊಳಗೆ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ತಪ್ಪಿದೆ.




