ಮಲ್ಪೆ: ಸಮುದ್ರದ ಅಲೆಗೆ ಕೊಚ್ಚಿ ಹೋದ ಮೂವರಲ್ಲಿ ಒರ್ವ ಮೃತ್ಯು, ಇಬ್ಬರ ರಕ್ಷಣೆ

ಮಲ್ಪೆ: ಪ್ರವಾಸಕ್ಕೆಂದು ಮಲ್ಪೆ ಬೀಚ್’ಗೆ ಬಂದಿದ್ದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿ ಒರ್ವ ಮೃತಪಟ್ಟಿದ್ದಾನೆ. ಇಬ್ಬರನ್ನು ರಕ್ಷಿಸಲಾಗಿದೆ.

ಮೃತರನ್ನು ಹಾಸನದ ಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ರಕ್ಷಿಸಿದ ಇಬ್ಬರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಶ್ವರ್ ಮಲ್ಪೆ ಮತ್ತು ತಂಡ ರಕ್ಷಣೆಯ ಕಾರ್ಯ ನಡೆಸಿತ್ತು.

ಬೇಲೂರಿನಿಂದ 20 ಮಂದಿ ಪ್ರವಾಸಕ್ಕೆಂದು ಆಗಮಿಸಿದ್ದರು. ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

Latest Indian news

Popular Stories