ಅಮಿತ್ ಶಾ ವಿರುದ್ಧದ ನಕಲಿ ವಿಡಿಯೋ ಆರೋಪ |ತೆಲಂಗಾಣ ಕಾಂಗ್ರೆಸ್‌ ಘಟಕದ ಐಟಿ ಸೆಲ್‌ನ ಮೂವರ ಬಂಧನ

ಕೇಂದ್ರ ಸಚಿವ ಅಮಿತ್​ ಶಾ(Amit Shah) ವಿರುದ್ಧದ ಫೇಕ್​ ವಿಡಿಯೋಗೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್​(Congress)ನ ಐಟಿ ಸೆಲ್​ನ ಮೂವರನ್ನು ಬಂಧಿಸಲಾಗಿದೆ. ಮೀಸಲಾತಿ ತೆಗೆದುಹಾಕುವ ಬಗ್ಗೆ ವಿಡಿಯೋ ತಿರುಚಲಾಗಿತ್ತು, ಅಮಿತ್ ಶಾ ಹೇಳಿಕೆ‌ ತಿರುಚಿ ವಿಡಿಯೋ ಮಾಡಲಾಗಿತ್ತು, ತೆಲಂಗಾಣದ‌ ಕೆಲ ನಾಯಕರು ವಿಡಿಯೋ‌ ಶೇರ್ ಮಾಡಿದ್ದರು.

ಸಿಆರ್​ಪಿಸಿಯ ಸೆಕ್ಷನ್ 91ರ ಅಡಿಯಲ್ಲಿ ಸತೀಶ್​ ಮನ್ನೆ, ನವೀನ್ ಪೆಟ್ಟೆಮ್ ಮತ್ತು ಅಸ್ಮಾ ತಸ್ಲೀಮ್​ ವಿರುದ್ಧ ಪ್ರಕರಣ ದಾಖಲಾಗಿದೆ

ಮೀಸಲಾತಿ ಹೇಳಿಕೆಯನ್ನು ತಿರುಚಿ ವಿಡಿಯೋ ಅಪ್ಲೋಡ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರಿಗೆ ದೆಹಲಿ ಪೊಲೀಸರು ಈಗಾಗಲೇ ಸಮನ್ಸ್‌ ಜಾರಿ ಮಾಡಿದ್ದಾರೆ. ರೇವಂತ್‌ ರೆಡ್ಡಿ ಸೇರಿದಂತೆ ತೆಲಂಗಾಣ ಮೂಲದ ಇತರ ನಾಲ್ವರಿಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ನೋಟಿಸ್‌ಗೆ ಪ್ರತಿಕ್ರಿಯಿಸಿರುವ ರೇವಂತ್‌ ರೆಡ್ಡಿ, ಬಿಜೆಪಿ ಸಿಬಿಐ, ಜಾರಿ ನಿರ್ದೇಶನಾಲಯವನ್ನು ಬಳಸುತ್ತಿತ್ತು. ಈಗ ದೆಹಲಿ ಪೊಲೀಸರ ಮೂಲಕ ವಿರೋಧಿ ಪಕ್ಷಗಳನ್ನು ನಿಯಂತ್ರಿಸಲು ಮುಂದಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಟೀಕಿಸಿದರು.

ದೂರಿನ ಬಳಿಕ ಪೊಲೀಸರು ಐಪಿಸಿ ಸೆಕ್ಷನ್ 153, 153 ಎ, 465, 469, 171 ಜಿ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೀಡಿಯೊವನ್ನು ಅಪ್‌ಲೋಡ್ ಮಾಡಿದ ಮತ್ತು ಹಂಚಿಕೊಂಡ ಖಾತೆಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಎಕ್ಸ್ ಮತ್ತು ಫೇಸ್‌ಬುಕ್‌ಗೆ ನೋಟಿಸ್ ನೀಡಿದ್ದಾರೆ.

Latest Indian news

Popular Stories