ಮೂಲ್ಕಿ: ಇಲ್ಲಿನ ಕೊಲಾ°ಡು ಬಳಿ ಬೆಳಗ್ಗೆ 7 ಗಂಟೆ ವೇಳೆಗೆ ಉಡುಪಿಯತ್ತ ಹೋಗು ತ್ತಿದ್ದ ಬೊಲೆರೊ ಕಾರು ಪಲ್ಟಿಯಾಗಿ ಪವಾಡಸದೃಶವಾಗಿ ಚಾಲಕ ಸಹಿತ ಕಾರಿನಲ್ಲಿದ್ದವರೆಲ್ಲರೂ ಅಪಾಯ ದಿಂದ ಪಾರಾಗಿರುವ ಘಟನೆ ಸಂಭವಿಸಿದೆ.
ಹೆದ್ದಾರಿಯಲ್ಲಿ ಗ್ಯಾಸ್ ಪೈಪ್‌ಲೈನ್ ಕೆಲಸ ಮಾಡುತ್ತಿದ್ದವರ ತಂಡದ ಟ್ರ್ಯಾಕ್ಟರ್‌ರೊಂದರ ಚಾಲಕ ತನ್ನ ಪಥವನ್ನು ತತ್‌ಕ್ಷಣ ಬದಲಾಯಿಸಿದ ಕಾರಣ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಹಠಾತ್ ಆಗಿ ನಿಲ್ಲಿಸಲು ಪ್ರಯತ್ನಿಸಿದಾಗ ಹತೋಟಿ ಕಳೆದುಕೊಂಡು ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಮಗು ಸಹಿತ ನಾಲ್ವರು ಮಹಿಳೆಯರು ಹಾಗೂ ಪುರುಷರು ಸೇರಿ 7 ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಕಾರಿನ ಚಾಲಕನನ್ನು ಮುಕ್ಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗೊಂಡರು. ಕಾರು ಪೂರ್ಣ ನಜ್ಜುಗುಜ್ಜಾಗಿದೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.