ಬಾಗಲಕೋಟೆ; ಸೈಬರ್ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ನೀವು ನಿಮ್ಮ ಕುಟುಂಬದವರೊಂದಿಗೆ ಸೈಬರ್ ದಾಳಿಗಳ ಪರಿಣಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯಬಹುದು ಎಂದು ಕೆರೂರ ಪೊಲೀಸ್ ಠಾಣೆಯ ಪಿ.ಎಸ್.ಐ. ಕುಮಾರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕೀಯರ ವಸತಿ ಶಾಲೆ (ಕೆಜಿಬಿವ್ಹಿ)ಯಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈಬರ್ ಸುರಕ್ಷತೆ ಕುರಿತು ಮಾತನಾಡಿ ದಿನದಿಂದ ದಿನಕ್ಕೆ ಜಗತ್ತು ಡಿಜಿಟಲ್ ಆಗಿ ಅಭಿವೃದ್ಧಿಯ ಜೊತೆಗೆ ಸೈಬರ್ ದಾಳಿಯ ಬೆದರಿಕೆ ಬರುತ್ತದೆ. ಸೈಬರ್ ಸ್ಪೇಸ್ ಅಂದರೆ ಕಂಪ್ಯೂಟರ್, ಇಂಟರ್ನೆಟ್, ಸೇಲ್ ಫೋನ್ ಇತರೆ ತಾಂತ್ರಿಕ ಸಾಧನಗಳು ಇತ್ಯಾದಿಗಳನ್ನು ಒಬ್ಬ ವ್ಯಕ್ತಿ ಅಥವಾ ಸಂಘಟಿತ ಗುಂಪಿನಿಂದ ಅಪರಾಧ ಮಾಡಲು ಬಳಸುವುದನ್ನು ಸೈಬರ್ ಕ್ರೈಮ್ ಎಂದು ಕರೆಯುತ್ತೇವೆ. ಅದಕ್ಕಾಗಿ ಸೈಬರ್ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ನೀವು ನಿಮ್ಮ ಕುಟುಂಬದವರೊಂದಿಗೆ ಸೈಬರ್ ದಾಳಿಗಳ ಪರಿಣಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯಬಹುದು ಅಂತೆಯೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ರ ಉಪಯೋಗ ಮತ್ತು 112 ಪೋಲಿಸ್ ಸಹಾಯವಾಣಿ ನೆರವು ಪಡೆದು ಭವಿಷ್ಯತ್ತಿನ ವಾರಸುದಾರರಾಗಿ ಉತ್ತಮ ಮಹಿಳಾ ಋಣಿಗಳಾಗಿರಿ. ಈ ಶಾಲಾ ಮಕ್ಕಳ ಶಿಸ್ತು, ಕಲಿಕೆ, ವಾತಾವರಣ, ಮೆಚ್ಚುಗೆ ಪಡುವಂತಹದ್ದು ಎಂದರು.
ವೇದಿಕೆಯ ಮೇಲೆ ಕೆರೂರ ಪೊಲೀಸ್ ಠಾಣೆಯ ಹವಾಲ್ದಾರ ಪರಶುರಾಮ ಹಾಗೂ ಅರ್ಜುನ್ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಅನಿತಾ ಜಾಲಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.