ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥ: ಐವರು ಗಂಭೀರ

ಬೆಳಗಾವಿ: ಪ್ರಸಾದ ಸೇವಿಸಿ 46 ಜನ ಭಕ್ತರು ಅಸ್ವಸ್ಥರಾಗಿದ್ದು, ಐವರು ಭಕ್ತರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಬೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ ಗ್ರಾಮದ ಜನ ಅಸ್ವಸ್ಥರಾಗಿದ್ದಾರೆ.

ಪ್ರಸಾದ, ಮನೆಯಲ್ಲಿ ಮಾವಿನ ಹಣ್ಣಿನ ಶೀಖರಣೆ ಸೇವಿಸಿದ್ದ ಜನರಲ್ಲಿ ಏಕಾಏಕಿ ವಾಂತಿ ಭೇದಿ ಶುರುವಾಗಿದೆ. ಕೂಡಲೇ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸವದತ್ತಿ ಆಸ್ಪತ್ರೆ ಮತ್ತು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಲಾಗಿದೆ. ತೀವ್ರ ಅಸ್ವಸ್ಥರಾದ ಐವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Latest Indian news

Popular Stories