ಕಾರವಾರ: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಭಾವೈಕ್ಯ ಮೆರೆದಿದ್ದಾರೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅಂತರ್ ಧರ್ಮೀಯ ವಿವಾಹವಾಗಿದ್ದು , ಮಾನವೀಯತೆಯೇ ಧರ್ಮ ಎಂದು ತಿಳಿದು ಬದುಕುವವರು. ಜನಪರ ಅಧಿಕಾರಿಯೂ ಹೌದು. ಅವರ ಪತ್ನಿ ಇಂಡಿಯನ್ ರೈಲ್ವೆ ಸರ್ವೀಸ್ ಮುಗಿಸಿ, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ನಿನ್ನೆ ಗಣೇಶ ಮೂರ್ತಿಯನ್ನು ಮೊದಲು ಕಿತ್ತೂರು ಚೆನ್ನಮ್ಮ ಸರ್ಕಲ್ ನ ಗಣಪತಿ ದೇವಸ್ಥಾನಕ್ಕೆ ಒಯ್ದು, ಅಲ್ಲಿ ಪೂಜೆ ಮಾಡಿಸಿ, ನಂತರ ತಮ್ಮ ಮನೆಯಲ್ಲಿ ಗಣಪತಿ ಸ್ಥಾಪನೆ ಮಾಡಿ, ಹಬ್ಬ ಆಚರಿಸಿದರು. ಪತ್ನಿ ಅಂಕಿತ, ಮಗ ಆಯಾನ್ ಹಾಗೂ ಎರಡೂ ಕುಟುಂಬ ವರ್ಗದವರು, ಜಿಲ್ಲಾಡಳಿತದ ಕೆಲ ಸಿಬ್ಬಂದಿ ಗಣೇಶ ಹಬ್ಬದಲ್ಲಿ ಭಾಗವಹಿಸಿದ್ದರು. ಭಾವೈಕ್ಯತೆಯ ರೂಪವೇ ಆಗಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ , ಬೆಳಗಾವಿ ಜಿಲ್ಲಾಧಿಕಾರಿಯಾಗಿ ಸಹ ಒಂದು ಸೌಹಾರ್ದ ಮಾದರಿಯನ್ನು ಪ್ರಾರಂಭಿಸಿದ್ದಾರೆ. ಮೊಹಮ್ಮದ್ ರೋಶನ್ ಕಾರವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಜನಪ್ರಿಯ ಕಾರ್ಯ ನಿರ್ವಹಿಸಿದ್ದರು.
….