bellary

ಅನಾಮಧೇಯ ಶವ ಪತ್ತೆ: ಪ್ರಕರಣ ದಾಖಲು ವಿಜಯನಗರ

ಹೊಸಪೇಟೆ(ವಿಜಯನಗರ)ಏ.17(ಕರ್ನಾಟಕ ವಾರ್ತೆ): ಹೊಸಪೇಟೆ ತಾಲೂಕಿನ ಕಮಲಾಪುರದ ಹೆಚ್.ಪಿ.ಸಿ. ಬಳಿ ಇರುವ ಪೋರ್ ಬೇ ಹತ್ತಿರದ ಕಾಲುವೆಯಲ್ಲಿ 25-30ವರ್ಷದ ಅನಾಮಧೇಯ ಗಂಡಸಿನ ಶವ ಪತ್ತೆಯಾಗಿರುವ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶವದ ಚಹರೆ ಗುರುತು: 5.5ಅಡಿ ಎತ್ತರ, ಮೈಮೇಲಿನ ಚರ್ಮವನ್ನು ಜಲಚರ ಪ್ರಾಣಿಗಳು ತಿಂದಂತೆ ಕಂಡು ಬರುತ್ತದೆ, ಮೈಮೇಲೆ ಕಪ್ಪು ನೀಲಿ ಕಲರ್ ಪ್ಯಾಂಟ್ ಮತ್ತು ಕಾಫಿ ಕಲರ್ ಲಾಂಗ್ ಚಡ್ಡಿ ಹಾಗೂ ಉಡುದಾರ ಇರುತ್ತದೆ.
ಮೃತನ ವಾರಸುದಾರರ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ: 100 ಅಥವಾ ಎಸ್.ಪಿ.ಕಚೇರಿ ಬಳ್ಳಾರಿ: 08392-258300, ಡಿ.ಎಸ್.ಪಿ.ಹಂಪಿ: 08394-241600, ಸಿ.ಪಿ.ಐ.ಕಚೇರಿ ಕಂಪ್ಲಿ: 08394-251599, ಪಿ.ಎಸ್.ಐ.ಕಮಲಾಪುರ ಠಾಣೆ: 08394-241240 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button