ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ೩೮ನೇ ವಾರ್ಡ್ನ ಬಿ.ಜೆ.ಪಿ ಅಭ್ಯರ್ಥಿ ವಿ.ಅನೂಪ್ ಕುಮಾರ್

ಬಳ್ಳಾರಿ: ಇದೇ ತಿಂಗಳು ೨೭ರಂದು ನಡೆಯುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರದ ೩೮ನೇ ವಾರ್ಡಿನ ಬಿ.ಜೆ.ಪಿ ಅಭ್ಯರ್ಥಿಯಾಗಿ ವಿ.ಅನೂಪ್ ಕುಮಾರ್ ಸ್ಪರ್ಧಿಸಲಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಹಾಗೂ ಸಮಾಜಕಲ್ಯಾಣ ಇಲಾಖೆ ಸಚಿವರಾದ ಬಿ.

ಶ್ರೀರಾಮುಲು, ಬಳ್ಳಾರಿ ನಗರ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಮಾಜಿ ಸಂಸದ ಸಣ್ಣ ಫಕೀರಪ್ಪ ಹಾಗೂ ಮಾಜಿ ಶಾಸಕರಾದ ಸುರೇಶ್ ಬಾಬುರವರ ಮಾರ್ಗದರ್ಶನದಲ್ಲಿ ವಿ.

ಅನೂಪ್ ಕುಮಾರ್‌ರವರು ಚುನಾವಣಾ ಸ್ಪರ್ಧಾಕಣಕ್ಕೆ ಇಳಿಯುತ್ತಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಎಲ್ಲಾ ಧುರೀಣರ, ವಾರ್ಡಿನ ಬೂತ್ ಮಟ್ಟದ ಕಾರ್ಯಕರ್ತರು ವಿ. ಅನೂಪ್ ಕುಮಾರ್ ರವರು ಸ್ಪರ್ಧಿಸುತ್ತಿರುವುದಕ್ಕೆ ಹರ್ಷಚಿತ್ತರಾಗಿದ್ದು, ಚುನಾವಣೆಗಾಗಿ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ.

ವಾರ್ಡಿನ ಜನಸಾಮಾನ್ಯರು ಕೂಡಾ ಆಶೀರ್ವದಿಸಿ, ಅವರ ಸೇವೆ ಮಾಡಲು ಈ ಬಾರಿ ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸ ವಿ. ಅನೂಪ್ ಕುಮಾರ್ ಅವರದ್ದು.
ಎಂಟೆಕ್ ಪದವಿಧರರಾದ ವಿ.

ಅನೂಪ್ ಕುಮಾರ್‌ರವರು ಹಲವು ವರ್ಷಗಳಿಂದ ಪತ್ರಿಕೋದ್ಯಮ ಹಾಗು ಸಾಮಾಜೀಕ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಕರ್ನಾಟಕ ರಾಜ್ಯ ಮಟ್ಟದ ದಿನಪತ್ರಿಕೆಗಳ ಸಂಪಾದಕರ ಸಂಘಟನೆಯ ಉಪಾಧ್ಯಾಕ್ಷರಾಗಿರುವ ಇವರು.

ನಗರದ ಪ್ರಮುಖ ಭೋವಿ ಸಮುದಾಯ ಮುಖಂಡ ಹಾಗು ಹಿರಿಯ ವಕೀಲರಾದ ವಿ.ವಿಜಯಕುಮಾರ್‌ರವರ ಪುತ್ರರಾಗಿದ್ದಾರೆ. ನಗರದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಟ್ಟಿಕೊಂಡು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದಾರೆ.

ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಕಾರಣ ಬಳ್ಳಾರಿ ನಗರದ ಜನತೆ ಎದುರಿಸುತ್ತಿರುವ ಸಮಸ್ಯಗಳ ನೇರ ಪರಿಚಯವಿದ್ದು, ದಿನನಿತ್ಯ ಜನರು ಎದುರಿಸುತ್ತಿರುವ ಕುಂದು ಕೊರತೆಗಳ ಬಗ್ಗೆ, ಆಡಳಿತಯಂತ್ರದ ಲೋಪದೋಷಗಳ ಬಗ್ಗೆ ಪರಿಣಾಮಕಾರಿ ಲೇಖನಗಳನ್ನು ಬರೆದು ಸಮಸ್ಯೆಗಳ ಪರಿಹಾರಕ್ಕೆ ನಾಂದಿ ಹಾಡಿರುವ ಉದಾಹರಣೆಗಳು ಅನೇಕ.

ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಅಧಿಕಾರಿಗಳು ಎಚ್ಚೆತ್ತು, ಅಯಾ ಸಮಸ್ಯೆಗಳನ್ನು ಪರಿಹರಿಸಿರುತ್ತಾರೆ. ನೀರು ಸರಬರಾಜು ವ್ಯತ್ಯಯ ,ಒಳಚರಂಡಿ ಅವ್ಯವಸ್ಥೆ, ರಸ್ತೆಗಳ ದುರವಸ್ಥೆ, ನಗರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಜನರ ಅಹವಾಲುಗಳ ಆಲಿಕೆಯಲ್ಲಿ ಅಧಿಕಾರಿಗಳ ನಿರ್ಲಕ್ಷö್ಯ..

ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ನಿಂತಿದ್ದಾರೆ ವಿ.ಅನೂಪ್ ಕುಮಾರ್ . ಈಗ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧಿಸುವ ಮೂಲಕ ನೇರವಾಗಿ ಸಾರ್ವಜನಿಕ ಬದುಕಿಗೆ ಧುಮುಕಿ ಜನಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸುತ್ತಿದ್ದಾರೆ.

ತಮ್ಮ ಪತ್ರಿಕೋದ್ಯಮ ಹಾಗು ಸಾಮಾಜೀಕ ಸೇವಾ ಕಾರ್ಯ ಚಟುವಟಿಕೆಗಳ ಅನುಭವದ ಭೂಮಿಕೆಯ ಹಿನ್ನೆಲೆಯಲ್ಲಿ ೩೮ನೇ ವಾರ್ಡಿನ ಹಾಗೂ ಒಟ್ಟಾರೆ ಬಳ್ಳಾರಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ.
೩೮ನೇ ವಾರ್ಡಿನ ಜನತೆಯ ಸೇವಾಕಾಂಕ್ಷಿಯಾಗಿ ಜನಸಾಮಾನ್ಯರ ಜೀವನ ಹಾಗೂ ವಾರ್ಡಿನ ಒಟ್ಟಾರೆ ಚಿತ್ರಣದಲ್ಲಿ ಮಹತ್ವದ ಮಾರ್ಪಡು ತರುವ ವಿಶ್ವಾಸವನ್ನು ವಿ.ಅನೂಪ್ ಕುಮಾರ್ ಹೊಂದಿದ್ದು, ಈ ನಿಟ್ಟಿನಲ್ಲಿ ಜನರ ಆಶೀರ್ವಾದವನ್ನು ನಿರೀಕ್ಷಿಸುತ್ತಿದ್ದಾರೆ..

Latest Indian news

Popular Stories