ಪ್ರಪ್ರಥಮ ಬಾರಿ ಏಪಿಎಂಸಿ ಗಾಂಧೀಜಿ ಹೋಲ್ಸೇಲ್ ತರಕಾರಿ ಮಾರುಕಟ್ಟೆಯಲ್ಲಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ೧೩೦ನೇ,ಬಾಬು ಜಗಜೀವನ್‌ರಾಮ್ ೧೧೩ನೇ ಜಯಂತಿ ಆಚರಣೆ

ಬಳ್ಳಾರಿ ಏ ೧೪. ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ. ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತಿ ಹಾಗು ಬಾಬು ಜಗಜೀವನ್‌ರಾಮ್ ೧೧೩ನೇ ಜಯಂತಿಯನ್ನು ನಗರದ ಏಪಿಎಂಸಿ ಗಾಂಧೀಜಿ ತರಕಾರಿ ಮಾರುಕಟ್ಟೆಯಲ್ಲಿ ಪ್ರಪ್ರಥಮಬಾರಿ ಆಚರಣೆ ಮಾಡಲಾಯಿತು.

ಏಪಿಎಂಸಿ ಮಾಜಿ ಸದಸ್ಯ ಪಾಲಣ್ಣ ನವರು ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದುಳಿದ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವರು ಪಟ್ಟ ಶ್ರಮ ಎಲ್ಲಾ ಪೀಳಿಗೆಗೂ ಉದಾಹರಣೆಯಾಗಲಿದೆ ಎಂದರು.

ಸAವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗು ಬಾಬು ಜಗಜೀವನ್‌ರಾಮ್ ಅವರ ೧೧೩ನೇ ಜಯಂತಿಯ ಶ್ರದ್ಧಾಪೂರ್ವಕ ಪ್ರಣಾಮಗಳು ತಿಳಿಸಿದರು.

ಸಮಾಜದಲ್ಲಿ ಸ್ವಾತಂತ್ರ‍್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ. ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ ಎಂದು ಅಭಿಪ್ರಾಯ ಪಟ್ಟರು.

ತದನಂತರ ಮುಂಡ್ರಿಗಿ ನಾಗರಾಜು,ಮಾನಯ್ಯ,ಅರ್ಜುನ್ ಹೆಗಡೇ,ವೆಂಕಟೇಶ್ ಮಾತನಾಡುತ್ತಾ ಸಂವಿಧಾನ ಶಿಲ್ಪಿ, ಭಾರತರತ್ನ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯAದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು.

ಸಮಾಜದಲ್ಲಿ ಸ್ವಾತಂತ್ರ‍್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ|| ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ ಎಂದರು.

ಬಡತನಕ್ಕೆ ವಿದ್ಯೆಯೇ ಮದ್ದು, ಜ್ಞಾನಕ್ಕಿಂತ ಬೇರೆ ಸಂಪತ್ತಿಲ್ಲ ಎಂದು ಇಡೀ ವಿಶ್ವಕ್ಕೆ ತೋರಿದ ಭಾರತದ ರತ್ನ. ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿಗಳಾದ ಭಾರತದ ಸಂವಿಧಾನ ಶಿಲ್ಪಿ “ಡಾ. ಬಿ. ಆರ್.

ಅಂಬೇಡ್ಕರ್”ರವರ ಜನ್ಮ ದಿನ ಅಂಬೇಡ್ಕರ್ ಜಯಂತಿ ಎಂದು ತಿಳಿಸಿದರು.ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶ ಕಂಡ ಮಹಾನ್ ಮಾನವತವಾದಿ, ಮಾನವೀಯ ತತ್ವಗಳನ್ನುಸ ಸಮ ಸಮಾಜವನ್ನು ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದವರು ಎಂದರು.

ಸಮ ಸಮಾಜವನ್ನು ನಿರ್ಮಾಣ ಮಾಡಲು ಯತ್ನಿಸಿದಂತಹ ಬಾಬಾ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಕೇವಲ ಒಂದು ಸಮುದಾಯವಲ್ಲ ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅದನ್ನು ಅಳವಡಿಸಿಕೊಂಡರೆ ಉತ್ತಮ ದೇಶವನ್ನು.

ಉತ್ತಮ ಸಮಾಜವನ್ನು, ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಪ್ರಯತ್ನವಿರಲಿ ಎಂದು ತಿಳಿಸಿದರು.

ಈಸಂಧರ್ಭದಲ್ಲಿ ಎಪಿಎಂಸಿ ಸಿಬ್ಬಂದಿ ಶರಣಬಸವ, ಮಂಜುನಾಥ್,ಪಿ.ಆರ್.ಎಲ್.ಆAಜನೇಯುಲು,ರಾಜ,ಫೋಟೋ ರಾಜ,ದೇವರಾಜ್, ಎ.ಎಂ.ಆರ್.ರಾಜ, ನಂದೀಶ್.

ಎಸ್.ಆರ್.ರಾಮಂಜಿನಿ,ಮಾರುತಿ,ಸುರೇಶ್, ಶ್ರೀನಿವಾಸ್,ಶಿವ,ಗೋವರ್ಧನ್,ಅನೂಪ್,ಕ್ರಿಷ್ಣ ಮತ್ತು ದಳಾಲಿ ವರ್ತಕರು ಇನ್ನಿತರರು ಉಪಸ್ಥಿತರಿದ್ದರು.

ಫೋಟೋ೧೪ಬಿಎಲ್‌ಆರ್‌೦೧—-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ೧೩೦ನೇ,ಬಾಬು ಜಗಜೀವನ್‌ರಾಮ್ ೧೧೩ನೇ ಜಯಂತಿ ಆಚರಣೆಯ ಚಿತ್ರಗಳು.

Latest Indian news

Popular Stories