ಆಮ್ವೇ ನ್ಯೂಟ್ರಲೈಟ್ ರಾಯಭಾರಿಯಾಗಿ ಮೀರಾಬಾಯಿ ಚಾನು

ಬಳ್ಳಾರಿ : ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕ ಗೆದ್ದ ಸೈಖೋಂ ಮೀರಾಬಾಯಿ ಚಾನು ಅವರನ್ನು ಆಮ್ವೇ ಇಂಡಿಯಾ, ಇಮ್ಯಾನ್ಯುಯಲ್ ಗ್ಲೋಬಲ್ ಕಲ್ಸಲ್ಟೆನ್ಸೀಸ್ ಮೂಲಕ ತನ್ನ ನ್ಯೂಟ್ರಲೈಟ್ ಉತ್ಪನ್ನ ಶ್ರೇಣಿಗೆ ರಾಯಭಾರಿಯನ್ನಾಗಿ ಇತ್ತೀಚೆಗೆ ಆಯ್ಕೆ ಮಾಡಿಕೊಂಡಿದೆ.
ನ್ಯೂಟ್ರಿಲೈಟ್ ಡೈಲಿ, ಒಮೆಗಾ ಮತ್ತು ಆಲ್‌ಪ್ಲಾಂಟ್ ಪ್ರೊಟೀನ್‌ಗಳ ಮೇಲಿನ ಕಂಪನಿ ಅಭಿಯಾನದ ಮೇಲೆ ಚಾನು ಗಮನ ಹರಿಸಲಿದ್ದಾರೆ. ಒಲಿಂಪಿಕ್ಸ್ ಪದಕ ವಿಜೇತರೊಂದಿಗಿನ ಸಹಯೋಗವು ದೇಶದ ಮಹಿಳೆಯರು ಮತ್ತು ಯುವಕರ ಆರೋಗ್ಯ ಮತ್ತು ಪೌಷ್ಟಿಕಾಂಶ ವರ್ಗವನ್ನು ಬಲಪಡಿಸುವ ಆಮ್ವೇ ಉದ್ದೇಶಕ್ಕೆ ಅನುಸಾರವಾಗಿದೆ ಎಂದು ಸಿಇಓ ಅಂಶು ಬುಧರಾಜ ವರ್ಚುವಲ್ ಹೇಳಿದ್ದಾರೆ.
ಚಾನು ಜತೆಗಿನ ಸಹಯೋಗವು ನಂಬಲಸಾಧ್ಯ ಸಾಧನೆ ಮಾಡಿದ ನಾಯಕಿಗೆ ಕಲ್ಪಿಸಿದ ಗೌರವವಾಗಿದ್ದು, ನಮ್ಮ ಕುಟುಂಬದ ಶೇ.60ರಷ್ಟು ನೇರ ಮಾರಾಟಗಾರರು ಮಹಿಳೆಯರಾಗಿದ್ದು, ಮಹಿಳೆಯರ ಸಬಲೀಕರಣ ಮತ್ತು ಉದ್ಯಮಶೀಲತೆ ಹೆಚ್ಚಿಸಲು ಇದು ಪ್ರಮುಖ ಹೆಜ್ಜೆ ಎಂದು ಅವರು ಬಣ್ಣಿಸಿದರು.
“ನ್ಯೂಟ್ರಿಲೈಟ್ ಒಂದು ಆಕರ್ಷಕ ಬ್ರಾಂಡ್ ಆಗಿದ್ದು, ಗಿಡಮೂಲಿಕೆ ಆಧಾರಿತ ಪೌಷ್ಠಿಕಾಂಶಗಳ ಪೂರಕ ಆಹಾರವಾಗಿ ವಿಶ್ವಾದ್ಯಂತ ಜನಪ್ರಿಯವಾಗಿದೆ. ವೃತ್ತಿಪರ ಅಥ್ಲೀಟ್ ಆಗಿ, ನನ್ನ ಫಿಟ್ನೆಸ್ ಹೆಚ್ಚಿಸಿಕೊಳ್ಳುವತ್ತ ಹಾಗೂ ಈ ಮೂಲಕ ಆಟ ಸುಧಾರಿಸುವತ್ತ ಸದಾ ಗಮನ ಹರಿಸುತ್ತೇನೆ. ಆದ್ದರಿಂದ ಸಮತೋಲಿತ ಆಹಾರದ ಮೂಲಕ ಸಾಕಷ್ಟು ಪೌಷ್ಟಿಕಾಶಗಳು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜನರ ಜೀವನವನ್ನು ಆರೋಗ್ಯಕರವಾಗಿಸಲು ಬದ್ಧವಾಗಿರುವ ವಿಶ್ವದ ನಂಬರ್ 1 ವಿಟಮಿನ್ ಮತ್ತು ಪೂರಕ ಪೌಷ್ಟಿಕ ಆಹಾರದ ಜತೆಗೆ ಸಹಯೋಗ ಹೊಂದಲು ಅತೀವ ಸಂತಸ ಎನಿಸುತ್ತಿದೆ ಎಂದರು. ಆಮ್ವೇ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಅಜಯ್ ಖನ್ನಾ ಉಪಸ್ಥಿತರಿದ್ದರು.

Latest Indian news

Popular Stories