ತಾಯಿ ಮತ್ತು ಮಕ್ಕಳು ಕಾಣೆ ; ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ),ಜು.23(ಕರ್ನಾಟಕ ವಾರ್ತೆ): ಹೊಸಪೇಟೆ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯ ಪಿಂಜಾರ್ ಹೆಗ್ಡಾಳ ಗ್ರಾಮದ ನಿವಾಸಿಯಾದ ಸುಮಾರು 26 ವರ್ಷದ ಆಶಾ ಮತ್ತು ಮಕ್ಕಳಾದ 9 ವರ್ಷ ವಯಸ್ಸಿನ ಮನೋಜ್ ಕುಮಾರ್, 7 ವರ್ಷ ವಯಸ್ಸಿನ ರಾಘವ ಕುಮಾರ ಎನ್ನುವವರು ಜು.13 ರಂದು ಕಾಣೆಯಾಗಿರುವ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಆರಕ್ಷಕ ಉಪನಿರೀಕ್ಷಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Missing children bellary


ಕಾಣೆಯಾದ ಮಹಿಳೆಯ ಚಹರೆ ಗುರುತು: ದಪ್ಪನೆಯ ಮೈಕಟ್ಟು, 5.2ಅಡಿ ಎತ್ತರ, ಕೋಲು ಮುಖ, ಕೇಸರಿ ಬಣ್ಣದ ಕಪ್ಪು ಗೇರೆಗಳುಳ್ಳ ಸೀರೆ, ಕಾಲಲ್ಲಿ ಹೈಹೀಲ್ಡ್ ಚಪ್ಪಲ್ಲಿ ಧರಿಸಿರುತ್ತಾರೆ.
ಮನೋಜ್ ಕುಮಾರ್ ಚಹರೆ ಗುರುತು: ತೆಳ್ಳನೇಯ ಮೈಕಟ್ಟು, 3.2ಅಡಿ ಎತ್ತರ, ದುಂಡು ಮುಖ, ಸಿಮೆಂಟ್ ಬಣ್ಣದ ಟೀ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ರಾಘವ ಕುಮಾರ ಚಹರೆ ಗುರುತು: 2.8ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಕೇಸರಿ ಬಣ್ಣದ ಬಿಳಿ ಚೆಕ್ಸ್ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕಾಣೆಯಾದ ತಾಯಿ ಮತ್ತು ಮಕ್ಕಳ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 100ಕ್ಕೆ ಅಥವಾ ಹಗರಿಬೊಮ್ಮನಹಳ್ಳಿ ಪಿ.ಎಸ್.:08397-240333/9480803065 ಈಮೇಲ್ ಐಡಿ: hbhಚಿಟಟibಟಡಿ@ಞsಠಿ.gov.iಟಿ, ಡಿವೈಎಸ್ಪಿ ಹೊಸಪೇಟೆ: 08394-224204, ಸಿಪಿಐ ಹಗರಿಬೊಮ್ಮಹಳ್ಳಿ :- 9480803030, ಎಸ್.ಪಿ.ಬಳ್ಳಾರಿ : 9480803001, ಕಂಪ್ಲೇಟ್ ನಂಬರ್ :- 9591905293 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

Latest Indian news

Popular Stories