ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್‌ಶಿಫ್ ಪ್ರಗತಿ ಪರಿಶೀಲನೆ ಬಡಾವಣೆಗಳಲ್ಲಿನ ಜನರಿಗೆ ಉದ್ಯೋಗಕ್ಕಾಗಿ ಜೀವನೋಪಾಯ ಕೇಂದ್ರ: ಡಿಸಿ ಮಾಲಪಾಟಿ

ಬಳ್ಳಾರಿ,ಆ.5(ಕರ್ನಾಟಕ ವಾರ್ತೆ): ಮುಂಡರಗಿ ಆಶ್ರಯ ಬಡಾವಣೆಯಲ್ಲಿ ವಾಸವಾಗುವ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಹಿತದೃಷ್ಟಿಯಿಂದ ಬಡಾವಣೆಯಲ್ಲಿ 39.27 ಎಕರೆ ವಿಸ್ತೀರ್ಣದಲ್ಲಿ ಜೀವನೋಪಾಯ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದ್ದು,ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕೇಂದ್ರ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮುಂಡರಗಿ ಆಶ್ರಯ ಬಡಾವಣೆ(ಮಹಾತ್ಮಗಾಂಧಿ ಟೌನ್‌ಶಿಫ್) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನೋಪಾಯ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ಅವರು ತಿಳಿಸಿದರು.
ಮುಂಡರಗಿ ಆಶ್ರಯ ಬಡಾವಣೆಯಲ್ಲಿ ಒಟ್ಟು 5616 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ 2592 ಮನೆಗಳು ನಿರ್ಮಿಸಲಾಗುತ್ತಿದೆ. ಸಾಧ್ಯವಾದರೇ 3500 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಡಿಸಿ ಅವರು ಸೂಚನೆ ನೀಡಿದರು.
ಈಗಾಗಲೇ 2389 ಫಲಾನುಭವಿಗಳು ಆಯ್ಕೆ ಮಾಡಲಾಗಿದ್ದು, ಅವರ ವಂತಿಗೆ ಭರಿಸುವ ಮತ್ತು ಬ್ಯಾಂಕ್‌ನಿAದ ಸಾಲಸೌಲಭ್ಯ ಒದಗಿಸುವುದಕ್ಕೆ ಅಧಿಕಾರಿಗಳು ನಿರಂತರ ಫಾಲೋಅಪ್ ಮಾಡಿ ಎಂದು ಹೇಳಿದರು. ಹೊಸದಾಗಿ 909 ಜನರು ವಸತಿ ಒದಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು,ಅವರಿಗೂ ಆಶ್ರಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು,ಅವರಿಗೂ ವಂತಿಗೆ ಭರಿಸುವ ಮತ್ತು ಬ್ಯಾಂಕ್ ಸಾಲಸೌಲಭ್ಯಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿ 128 ಫಲಾನುಭವಿಗಳನ್ನು ಒದಗಿಸಲಾಗುತ್ತಿದೆ. ಆಯ್ಕೆಯಾಗದೇ ಬಾಕಿ ಉಳಿದ 53 ಪೌರಕಾರ್ಮಿಕರು ಹಾಗೂ ಇತ್ತೀಚೆಗೆ ಕಾಯಂ ಆದ 76 ಪೌರಕಾರ್ಮಿಕರು ಅರ್ಜಿ ಸಲ್ಲಿಸಿದಲ್ಲಿ ಅವರಿಗೂ ವಸತಿಗಳನ್ನು ಒದಗಿಸಿಕೊಡಿ ಎಂದರು.
ಈಗ ನಿರ್ಮಾಣ ಮಾಡಲಾಗುತ್ತಿರುವ ವಸತಿ ಬಡಾವಣೆಗಳಲ್ಲಿ ಕೆಲ ಬದಲಾವಣೆಗಳು ಮಾಡಲಾಗುತ್ತಿದ್ದು,ಇದರಿಂದ ಸ್ವಲ್ಪ ಘಟಕ ವೆಚ್ಚ ಹೆಚ್ಚಾಗಲಿದೆ.ಇದಕ್ಕೆ ಸರಕಾರದಿಂದ ಅನುಮತಿ ಪಡೆದುಕೊಂಡು ಮುಂದಿನ ಕ್ರಮವಹಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಮುಂಡರಗಿ ಆಶ್ರಯ ಬಡಾವಣೆ ಪ್ರಗತಿ ಹಾಗೂ ವಸತಿ ಯೋಜನೆಗಳಿಗೆ ಸಂಬAಧಿಸಿದAತೆ ಸಭೆಯಲ್ಲಿ ಚರ್ಚೆ ನಡೆಯಿತು.
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Latest Indian news

Popular Stories