
ಬಳ್ಳಾರಿ,ಏ.15(ಕರ್ನಾಟಕ ವಾರ್ತೆ): Dead Body ಪಿಡಿ ಹಳ್ಳಿ ಬಳಿ ಗ್ಯಾಮೆನ್ ಇಂಡಿಯಾ ಕಂಪನಿ ಹತ್ತಿರ ಎನ್.ಹೆಚ್.63 ರಸ್ತೆಯ ಬದಿಯಲ್ಲಿ 55 ವರ್ಷದ ಅಪರಿಚಿತ ವ್ಯಕ್ತಿ ಏ.19 ರಂದು ಸಾವನ್ನಪ್ಪಿರುವ ಕುರಿತು ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಚಹರೆ ಗುರುತು: 5.6 ಅಡಿ ಎತ್ತರ, ನಸುಗಪ್ಪು ಮೈ ಬಣ್ಣ, ಕೋಲು ಮುಖ, ಬಿಳಿ ಬಣ್ಣದ ತುಂಬು ತೋಳಿನ ಬಿನಿನ್ ಮತ್ತು ಪಾಚಿಕಲರ್ ಚಡ್ಡಿ ಧರಿಸಿರುತ್ತಾನೆ.
ಮೃತ ವ್ಯಕ್ತಿಗೆ ಯಾರಾದರೂ ಸಂಬಂಧಿಕರು ಇದ್ದಲ್ಲಿ ಅಥವಾ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಬಳ್ಳಾರಿ ಕಂಟ್ರೋಲ್ ರೂಂ ದೂ.ಸಂ.08392-258100, ಪಿಡಿ ಹಳ್ಳಿ ಪೊಲೀಸ್ ಠಾಣೆಯ ದೂ.ಸಂ.08392-265010, ಪಿಡಿ ಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮೊ.ಸಂ.9480803052, ಬಳ್ಳಾರಿ ಗ್ರಾಮೀಣ ವೃತ್ತದ ಸಿ.ಪಿ.ಐ ಮೊ.ಸಂ.9480803031 ಸಂಪರ್ಕಿಸುವಂತೆ ಅವರು ಕೋರಿದೆ.




