ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 293 ಮಂದಿಗೆ ಡೆಂಘೀ ದೃಢ

ಬೆಂಗಳೂರು(ಜು.11): ರಾಜ್ಯದಲ್ಲಿ ಡೆಂಘೀ ಅಬ್ಬರ ಮುಂದುವರೆದಿದ್ದು ಬುಧವಾರ 293 ಮಂದಿಗೆ ಡೆಂಘಿ ಸೋಂಕು ದೃಢಪಟ್ಟಿದೆ. ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆಯಾಗಿದೆ.

ಬುಧವಾರ ಡೆಂಘೀ ವರದಿಯಾದ 293 ಮಂದಿಯ ಪೈಕಿ 100 ಮಂದಿ ಸೇರಿದಂತೆ ಡೆಂಘೀ ಜ್ವರದಿಂದ ಒಟ್ಟು 358 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಈವರೆಗೆ 58534 ಮಂದಿಗೆ ರಕ್ತ ಮಾದರಿ ಪರೀಕ್ಷೆ ನಡೆಸಿದ್ದು 7840 ಮಂದಿಗೆ ಡೆಂಘೀ ದೃಢಪಟ್ಟಿದೆ. ಜತೆಗೆ ಏಳು ಮಂದಿ ಅಧಿಕೃತವಾಗಿ ಡೆಂಘೀಗೆ ಬಲಿಯಾಗಿದ್ದಾರೆ. ಬುಧವಾರ 1,874 ಮಂದಿಗೆ ಪರೀಕ್ಷೆ ನಡೆಸಿದ್ದು 293 ಮಂದಿಗೆ ಡೆಂಘೀ ದೃಢಪಟ್ಟಿದೆ. ಈ ಪೈಕಿ ಒಂದು ವರ್ಷದೊಳಗಿನ ಮಕ್ಕಳಲ್ಲಿ ಇಬ್ಬರಿಗೆ ಡೆಂಘೀ ವರದಿಯಾಗಿದೆ.

Latest Indian news

Popular Stories